ತಿರುವನಂತಪುರ; ಜನರ ವಿರೋಧದ ನಡುವೆಯೂ ಕೆ.ರೈಲು ಯೋಜನೆಗೆ ಸರಕಾರ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಕಟುವಾಗಿ ಟೀಕಿಸಿದ್ದಾರೆ. ಕೆ ರೈಲ್ ಯೋಜನೆ ಮೂಲಕ ಕಮಿಷನ್ ಮಾಡುವುದೊಂದೇ ಸರಕಾರದ ಉದ್ದೇಶ. ಯಾರೇ ವಿರೋಧಿಸಿದರೂ ಯೋಜನೆ ಮುಂದುವರಿಸುವುದಾಗಿ ಮುಖ್ಯಮಂತ್ರಿ ಹೇಳಬಹುದೇ ಎಂದು ಪ್ರಶ್ನಿಸಿದರು.
ಕೆ ರೈಲು ಯೋಜನೆಯಲ್ಲಿ ಜನರಿಗೆ ಆಸಕ್ತಿ ಇದೆಯೇ ಎಂಬುದು ಮೊದಲು ತಿಳಿಯಬೇಕಾದ ವಿಷಯ. ಅದಕ್ಕಾಗಿ ಸಮೀಕ್ಷೆ ನಡೆಸುವುದು ಅಗತ್ಯ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಾಗಲೇ ಎಸ್‍ಡಿಪಿಐ ಮತ್ತು ಇತರ ಉಗ್ರಗಾಮಿ ಗುಂಪುಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ನಡೆದ 47 ರಾಜಕೀಯ ಹತ್ಯೆಗಳ ಪೈಕಿ 25ರಲ್ಲಿ ಸಿಪಿಐ(ಎಂ) ಪೋಲೀಸರಿಗೆ ಬೆಂಬಲ ನೀಡಿದೆ ಎಂದು ಆರೋಪಿಸಿದರು.
ಪಕ್ಷದ ನಿರ್ಧಾರಗಳಿಂದ ದೂರ ಉಳಿದಿರುವ ಶಶಿ ತರೂರ್ ಸಂಸದರ ವಿರುದ್ಧವೂ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಲ್ಲಿ ತರೂರ್ ಕೇವಲ ಸಂಸದ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕಾಂಗ್ರೆಸ್ ಎಂದರೆ ಶಶಿ ತರೂರ್ ಮಾತ್ರವಲ್ಲ. ಸುಧಾಕರನ್ ಮತ್ತು ತರೂರ್ ಅವರಿಗೂ ಪಕ್ಷದ ಕಾನು-ಕಟ್ಟಲೆಗಳು ಒಂದೇ ಎಂದರು.
ತರೂರ್ ಅವರ ಸಾಮಥ್ರ್ಯವನ್ನು ಪಕ್ಷ ಗುರುತಿಸಿದೆ. ಆದರೆ ಭಾರತದ ರಾಜಕೀಯದಲ್ಲಿ ಅವರು ಇನ್ನೂ ಸರಿಯಾದ ಹಾದಿಯಲ್ಲಿಲ್ಲ. ತರೂರ್ ಅವರ ಮುಖ ನೋಡಿ ಏನು ಹೇಳಬೇಕು ಎಂದು ಹೇಳಿದ್ದಾರೆ. ತರೂರ್ ನಿರ್ಧಾರಗಳು ಬದಲಾಗಬಹುದು ಎಂದು ಕೆ ಸುಧಾಕರನ್ ಸ್ಪಷ್ಟಪಡಿಸಿದ್ದಾರೆ. ತರೂರ್ ಪಕ್ಷಕ್ಕೆ ಮಣಿಯದಿದ್ದರೆ ಪಕ್ಷದಲ್ಲಿ ಇರುವುದಿಲ್ಲ ಎಂದು ಕೆ.ಸುಧಾಕರನ್ ಎಚ್ಚರಿಕೆ ನೀಡಿದರು.