ಮುಂಬೈ: ಮಹಾತ್ಮ ಗಾಂಧಿ ವಿರುದ್ಧಅವಹೇಳನಾಕಾರಿ ಪದ ಬಳಸಿದ್ದಕ್ಕಾಗಿ ಸ್ವಾಮೀಜಿ ಕಾಳಿಚರಣ್ ಮಹಾರಾಜ್ ವಿರುದ್ಧ ಮಹಾರಾಷ್ಟ್ರದ ಸಚಿವ ಜೀತೇಂದ್ರ ಅವದ್ ಬುಧವಾರ ಥಾಣೆಯಲ್ಲಿ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
ಛತ್ತೀಸ್ ಗಢದಲ್ಲಿ ಡಿಸೆಂಬರ್ 26 ರಂದು ನಡೆದ ಧರ್ಮ ಸಂಸದ್ ನಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಂ ಗೂಡ್ಸೆ ಅವರನ್ನು ಹೊಗಳುವಾಗ ಕಾಳಿ ಚರಣ್ ಮಹಾತ್ಮ ಗಾಂಧೀಜಿ ವಿರುದ್ದ ಅವಹೇಳನಾಕಾರಿ ಪದ ಬಳಸಿದ್ದರು.
ನೌಪದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವದ್, ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ವಿರುದ್ಧ ಕಾಳಿಚರಣ್ ಸ್ವಾಮೀಜಿ ಬಳಸಿರುವ ಪದ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಕೋಮು ಪ್ರಚೋದನೆ ಮತ್ತಿತರ ದುರುದ್ದೇಶ ಪೂರಿತ ಉದ್ದೇಶ ಮತ್ತು ಐಪಿಸಿ ಸೆಕ್ಷನ್ 294,295ಎ. 298, 505 (2) ಮತ್ತು 506(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ನೌಪದ್ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.