ಮುಳ್ಳೇರಿಯ: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಎಸ್ ಟಿ ಎ) ವತಿಯಿಂದ ಕಾಸರಗೋಡು ಉಪಜಿಲ್ಲಾ ಸಮ್ಮೇಳನದ ನಿಮಿತ್ತ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಚಟ್ಟಂಚಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಸಜಿತ್ ಉದ್ಘಾಟಿಸಿದರು. ಇ.ವಿನೋದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಜಿ.ಪ್ರತೀಶ್, ಎ.ಮಾಲತಿ, ಸಿ.ಪ್ರಶಾಂತ್ ಮಾತನಾಡಿದರು. ಸಿ.ಕೆ.ಜಗದೀಶ್ ಸ್ವಾಗತಿಸಿ, ಟಿ.ಮಧುಪ್ರಶಾಂತ್ ವಂದಿಸಿದರು.
ಡಿ.5ರಂದು ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮ್ಮೇಳನ ನಡೆಯಲಿದೆ. ಜಿಲ್ಲಾ ಕಾರ್ಯದರ್ಶಿ ಪಿ.ದಿಲೀಪಕುಮಾರ್ ಉದ್ಘಾಟಿಸುವರು. 4ರಂದು ಸಂಜೆ 4 ಗಂಟೆಗೆ ಕುಂಡಂಗುಳಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ರಾಜ್ಯ ಸಮಿತಿ ಸದಸ್ಯ ಕೆ.ಹರಿದಾಸ್ ಉದ್ಘಾಟಿಸುವರು. ಮಧ್ಯಾಹ್ನ 3.30ಕ್ಕೆ ಕುತ್ತಿಕೋಲ್‍ನಿಂದ ಕುಂಡಂಗುಳಿಗೆ ಬೈಕ್ ರ್ಯಾಲಿ ನಡೆಯಲಿದೆ.