ತ್ರಿಶೂರ್: ರಾತ್ರಿ ನಿರ್ಬಂಧದ ಹಿನ್ನೆಲೆಯಲ್ಲಿ ನಿನ್ನೆಯಿಂದ ಗುರುವಾಯೂರ್ ದೇವಸ್ಥಾನದಲ್ಲಿ ರಾತ್ರಿ ದರ್ಶನಕ್ಕೆ ನಿಯಂತ್ರಣ ಹೇರಲಾಗಿದೆ. ನಿನ್ನೆಯಿದ ಜನವರಿ 2 ರವರೆಗೆ ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುವುದು.
ಡಿಸೆಂಬರ್ 31 ರಿಂದ ಭಾನುವಾರದವರೆಗೆ ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಮಾತ್ರ ಭಕ್ತರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿದೆ. ಜನವರಿ 2ರ ವರೆಗೆ ಕೃಷ್ಣಾನಾಟ್ಟಂ ಪ್ರದರ್ಶನ ಇರುವುದಿಲ್ಲ ಎಂದು ದೇವಸ್ವಂ ಮಂಡಳಿ ತಿಳಿಸಿದೆ.
ರ್ನಿಂಧ ಹೇರಿದ ದಿನಗಳಲ್ಲಿ ಕೃಷ್ಣನಾಟಕ್ಕೆ ಬುಕ್ ಮಾಡಿದವರಿಗೆ ಇತರೆ ಅನುಕೂಲಕರ ದಿನಗಳಲ್ಲಿ ಕಾಣಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳು ಭದ್ರತಾ ವ್ಯವಸ್ಥೆಗೆ ಸಹಕರಿಸಬೇಕು ಎಂದು ದೇವಸ್ವಂ ತಿಳಿಸಿದೆ.
ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಮಿಕ್ರಾನ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ರಾತ್ರಿ ಪ್ರಯಾಣವನ್ನು ನಿಷೇಧಿಸಲಾಗಿದೆ.