ನವದೆಹಲಿ: ಅಸ್ಸಾಂ ರೈಫಲ್ಸ್‌ನ ಕೆಲ ವೈದ್ಯರು ಮತ್ತು ಹಿರಿಯ ಅಧಿಕಾರಿಗಳು ಗ್ರಾಮದ ಶಿಕ್ಷಕನೊಬ್ಬನೊಂದಿಗೆ ಸೇರಿ ಬಿಹಾರ ಮೂಲದ ಯುವ ಉದ್ಯೋಗ ಆಕಾಂಕ್ಷಿಗಳಿಗೆ ಅರೆಸೇನಾಪಡೆಯಲ್ಲಿ ಉದ್ಯೋಗ ನೀಡುವುದಾಗಿ ಹೇಳಿ, ಅವರಿಂದ ಲಂಚ ಪಡೆದು ಮೋಸ ಮಾಡಲು ಸಂಚು ರೂಪಿಸಿದ್ದರು ಎಂದು ಸಿಬಿಐ ಹೇಳಿದೆ.

ಈ ಸಂಬಂಧ ಬಿಹಾರದ ವೈಶಾಲಿ ಜಿಲ್ಲೆಯ ಜೆಂಹಾದ ಗ್ರಾಮದ ಶಿಕ್ಷಕ ಯಶವಂತ್ ಕುಮಾರ್ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ. ಅಸ್ಸಾ ರೈಫಲ್ಸ್‌ನ ಅಧಿಕಾರಿಗಳಿಗೆ ಯುವಕರನ್ನು ಯಶವಂತ್ ಪರಿಚಯಿಸುತ್ತಿದ್ದರು. ಬಳಿಕ ಯುವಕರಿಂದ ಪಡೆದ ಲಂಚದ ಹಣವನ್ನು ಅಧಿಕಾರಿಗಳಿಗೆ ತಲುಪಿಸುತ್ತಿದ್ದರು ಎನ್ನಲಾಗಿದೆ. ಈವರೆಗೆ ಅಧಿಕಾರಿಗಳು ಹಾಗೂ ವೈದ್ಯರ ಹೆಸರು ಬಯಲಾಗಿಲ್ಲ.
ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು, ವೈದ್ಯರು ಹಾಗೂ ಯಶವಂತ್ ನಡುವಿನ ಕರೆಗಳ ವಿವರವನ್ನು ಪೊಲೀಸರು ಪರಿಶೀಲಿಸಿದ್ದು, ಇದರಲ್ಲಿ ಯಶವಂತ್ ಮಧ್ಯವರ್ತಿಯಾಗಿ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣದ ವರ್ಗಾವಣೆ ಮತ್ತು ಸುಳ್ಳು ಭರವಸೆಗಳ ವಿವರಗಳನ್ನು ಒದಗಿಸುವ ಆಡಿಯೊ ಕ್ಲಿಪ್ ಅನ್ನು ಕೂಡ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವು 2019ರ ನವೆಂಬರ್ 4 ರಂದು ಬೆಳಕಿಗೆ ಬಂದಿತ್ತು. ಬಳಿಕ ಇದನ್ನು ಸಿಬಿಐಗೆ ವರ್ಗಾಯಿಸಲಾಯಿತು.