ನವದೆಹಲಿ: ಹದಿಹರೆಯದವರ ಲಸಿಕೆ ವಿತರಣೆಯಲ್ಲಿ ಎರಡು ಲಸಿಕೆಗಳನ್ನು ಬಳಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಭಾರತ್ ಬಯೋಟೆಕ್‌ನ ಕೊವಾಕ್ಸ್ ಮತ್ತು ಸೈಡಸ್ ಕ್ಯಾಡಿಲ್ಲಾದ ಡಿಎನ್‌ಎ ಲಸಿಕೆ, ಸೈಕೋವ್ ಡಿ ಲಭ್ಯವಾಗಲಿದೆ. ಹದಿಹರೆಯದವರಿಗೆ ಎರಡು ಲಸಿಕೆಗಳ ನಡುವೆ ಆಯ್ಕೆ ಮಾಡಲು ಅವಕಾಶವನ್ನು ನೀಡಲಾಗುವುದು ಎಂದು ಕೋವಿನ್ ಮುಖ್ಯಸ್ಥ ಆರ್.ಎಸ್.ಶರ್ಮಾ ಹೇಳಿದ್ದಾರೆ.
ಕೊವಾಕ್ಸಿನ್ ನೀಡಿದರೆ, ನಾಲ್ಕು ವಾರಗಳ ಮಧ್ಯಂತರದಲ್ಲಿ ಎರಡನೇ ಡೋಸ್ ಹಾಕಿಸಬೇಕು. ನೀಡುವ ಲಸಿಕೆ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಶಾಲಾ ಗುರುತಿನ ಚೀಟಿಯನ್ನು ಬಳಸಿಕೊಂಡು ಲಸಿಕೆಗಾಗಿ ನೋಂದಣಿಯನ್ನು ಸಹ ಮಾಡಬಹುದು. ಕೆಲವು ಹದಿಹರೆಯದವರು ಆಧಾರ್ ಕಾರ್ಡ್ ಹೊಂದಿಲ್ಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.