ಕಾಸರಗೋಡು: 'ನಮಗೂ ಬೇಕು ಉತ್ತಮ ಚಿಕಿತ್ಸೆ, ಮಾನವರಂತೆ ಜೀವಿಸಲು ನಮಗೂ ಅವಕಾಶ ಮಾಡಿಕೊಡಿ'ಮುಂತಾದ ಘೋಷಣೆಗಳೊಂದಿಗೆ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಒಕ್ಕೂಟದ ವತಿಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಸಾಂಕೇತಿಕ ಉಪವಾಸ ಮುಷ್ಕರ ನಡೆಯಿತು.
ಕಾಸರಗೋಡಿಗೆ ಎಐಐಎಂಎಸ್ ಮಂಜೂರುಗೊಳಿಸುವಂತೆ ಆಗ್ರಹಿಸಿ 'ಮುಖ್ಯ ಮಂತ್ರಿಯ ಅವಗಾಹನೆಗಾಗಿ, ಎಐಐಎಂಎಸ್ ಕಾಸರಗೋಡು ಜನಪರ ಒಕ್ಕೂಟದ ಹೋರಾಟ' ಎಂಬ ಘೋಷಣೆಯೊಂದಿಗೆ ಹೊಸ ಬಸ್ ನಿಲ್ದಾಣ ವಠಾರದ ಸಹಿಸಂಗ್ರಹ ಮರದಡಿಯಲ್ಲಿ ಈ ಉಪವಾಸ ಮುಷ್ಕರ ಹಮ್ಮಿಕೊಳ್ಳಲಾಗಿತ್ತು.
ಕಣ್ಣೂರು ವಿವಿ ವಿಶ್ರಾಂತ ಉಪಕುಲಪತಿ ಡಾ. ಖಾದರ್ ಮಾಙËಡ್ ಸಮಾರಂಭ ಉದ್ಘಾಟಿಸಿದರು. ನಾಸಿರ್ ಚೆರ್ಕಳ ಅಧ್ಯಕ್ಷತೆ ವಹಿಸಿದ್ದರು.ಶರೀಫ್ ಬೆಂಜಕ್ಕಳಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಂಬಲತ್ತರ ಕುಞÂಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಾಜಿ ಮಹಮ್ಮದ್ ಅಬ್ದುಲ್ ಖಾದರ್, ಆನಂದನ್ ಪೆರುಂಬಳ, ಸಿಸ್ಟರ್ ಜಯಾ ಆಂಟೋ ಮಂಗಲತ್, ಶ್ರೀನಾಥ್, ಶಶಿ ಟಿ.ವಿ, ಮುಕುಂದನ್ ಕಯ್ಯೂರ್, ಸಲೀಂ ಚೌಕಿ, ಹಮೀದ್ ಚೇರಂಗೈ, ಸಜೀವನ್ ಪುಳಿಕ್ಕೂರ್, ಗೋವಿಂದನ್ ಕಾಞಂಗಾಡ್, ಸತ್ಯಭಾಮಾ ಪೊಯಿನಾಚಿ, ಶರೀಫ್ ಮುಗು ಮುಂತಾದವರು ಉಪಸ್ಥಿತರಿದ್ದರು. ತಾಜುದ್ದೀನ್ ಪಡಿಞËರ್ ಸ್ವಾಗತಿಸಿದರು. ಫರೀನಾ ಕೋಟಪುರ ವಂದಿಸಿದರು.