ತಿರುವನಂತಪುರ: ಕಣ್ಣೂರು ವಿಶ್ವವಿದ್ಯಾನಿಲಯದ ನೇಮಕಾತಿಯಲ್ಲಿ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಇಲ್ಲಸಲ್ಲದ ಅಧಿಕಾರ ಬಳಸಿದ್ದಾರೆ. ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಗೋಪಿನಾಥ್ ರವೀಂದ್ರನ್ ಅವರ ಮರುನೇಮಕಕ್ಕೆ ಸಂಬಂಧಿಸಿದಂತೆ ಸಚಿವರಿಗೆ ಹಿನ್ನಡೆಯಾಗಿದೆ. ಡಾ.ಗೋಪಿನಾಥ್ ರವೀಂದ್ರನ್ ಅವರನ್ನು ಮರುನೇಮಕ ಮಾಡುವಂತೆ ಕೋರಿ ಪ್ರೊ-ಚಾನ್ಸಲರ್ ಆಗಿ ಸಚಿವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆದರೆ 1996ರ ಕಣ್ಣೂರು ವಿಶ್ವವಿದ್ಯಾನಿಲಯ ಕಾಯಿದೆ ಮತ್ತು ವಿಶ್ವವಿದ್ಯಾನಿಲಯದ ಶಾಸನವು ಪ್ರೊ-ಕುಲಪತಿಗಳಿಗೆ ಅಂತಹ ಹಕ್ಕಿದೆ ಎಂದು ಹೇಳುವುದಿಲ್ಲ.
ಗೋಪಿನಾಥ್ ರವೀಂದ್ರನ್ ಅವರನ್ನು ಮರು ನೇಮಕಮಾಡುವಂತೆ ಸಚಿವೆ ಬಿಂದು ಅವರು ಬರೆದ ಪತ್ರ ನಿನ್ನೆ ಬಹಿರಂಗಗೊಂಡಿತ್ತು. ಆದರೆ ಸಚಿವರು ರಾಜ್ಯಪಾಲರಿಗೆ ಬರೆದ ಪತ್ರಕಲ ಬಳಿಕದ ವಿವಾಧ ಕಾರಣ ರಾಜೀನಾಮೆ ನೀಡಬಾರದು ಎಂದು ಸಿಪಿಎಂ ಪಟ್ಟು ಹಿಡಿದಿದೆ. ಆದೇಶಕ್ಕೆ ಅಂಕಿತ ಹಾಕಿರುವ ರಾಜ್ಯಪಾಲರೇ ಇದಕ್ಕೆ ಹೊಣೆ ಎಂದು ಸಿಪಿಎಂ ಪ್ರತಿಪಾದಿಸಿದೆ. ರಾಜ್ಯಪಾಲರು ಸದ್ಭಾವನೆಯಿಲ್ಲದ ವಿಷಯಕ್ಕೆ ಏಕೆ ಸಹಿ ಹಾಕಿದರು ಮತ್ತು ಅವರು ಪ್ರಮಾಣ ವಚನವನ್ನು ಉಲ್ಲಂಘಿಸಿರುವರು ಎಂದು ಸಿಪಿಎಂ ಹೇಳುತ್ತದೆ. ಸಚಿವರು ಹೇಳಿದ್ದಕ್ಕೆಲ್ಲ ಸಹಿ ಹಾಕಬೇಕಾದವರು ರಾಜ್ಯಪಾಲರಲ್ಲ ಎಂದೂ ಹೇಳುತ್ತಾರೆ.
ನೂತನ ವಿಸಿ ಆಯ್ಕೆಗೆ ಶೋಧನಾ ಸಮಿತಿ ಜಾರಿಯಲ್ಲಿರುವಾಗಲೇ ಸಚಿವರು ಕಳೆದ ತಿಂಗಳು 22ರಂದು ಹಾಲಿ ವಿಸಿಯನ್ನೇ ಮರು ನೇಮಿಸಲು ಶಿಫಾರಸು ಮಾಡಿದ್ದರು. ಸರಕಾರ ಕಾನೂನು ಸಲಹೆ ಪಡೆದು ರಾಜ್ಯಪಾಲರಿಗೆ ಸಲ್ಲಿಸಿದೆ.