ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಎಂಪ್ಲೋಯೆಬಿಲಿಟಿ ಸೆಂಟರ್ ಮೂಲಕ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ತೆರವಾಗಿರುವ ಹುದ್ದೆಗಳಿಗೆ ಸಂದರ್ಶನ ನಡೆಯಲಿರುವುದು. ಸೀನಿಯರ್ ಎಜ್ಯುಕೇಶನ್ ಕನ್ಸಲ್ಟೆಂಟ್, ಟೀಮ್ ಲೀಡರ್, ಟೀಮ್ ಮೆನೇಜರ್, ಸೇಲ್ಸ್ ಎಕ್ಸಿಕ್ಯೂಟಿವ್ ಎಂಬ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.
ಸೀನಿಯರ್ ಎಜ್ಯುಕೇಶನ್ ಕನ್ಸಲ್ಟೆಂಟ್, ಟೀಮ್ ಮೆನೇಜರ್ ಹುದ್ದೆಗಳಿಗೆ ಪದವಿ, ಟೀಮ್ ಲೀಡರ್ ಹಾಗೂ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಪ್ಲಸ್‍ಟು ವಿದ್ಯಾರ್ಹತೆಯಾಗಿದೆ. ಸಂದರ್ಶನಕ್ಕೆ ಹಾಜರಗುವವರು ಡಿ. 7ರಂದು ಬೆಳಗ್ಗೆ 10ಕ್ಕೆ ಕಚೇರಿಗೆ ಮುಖತ: ಭೇಟಿಯಾಗಿ ನೋಂದಾವಣೆ ನಡೆಸಬೇಕು. ಹೊಸದಾಗಿ ನೋಂದಾವಣೆ ನಡೆಸಲು ಹಾಗೂ ಸಂದರ್ಶನದಲ್ಲಿ ಪಾಲ್ಗೊಳ್ಳಲು ದೂರವಾಣಿ ಸಂಖ್ಯೆ (9207155700)ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.