ಜೈಪುರ: ಪ್ರಿಯತಮೆಯ ಪತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಐದನೇ ಮಹಡಿಯಿಂದ ಜಿಗಿದು ಪ್ರಿಯಕರ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಜೈಪುರದಲ್ಲಿನ ಪ್ರತಾಪ್ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಉತ್ತರಪ್ರದೇಶದ ಮೊಹ್ಸಿನ್(29) ಎಂದು ಗುರುತಿಸಲಾಗಿದೆ. ಮೊಹ್ಸಿನ್ ವಿವಾಹಿತ ಮಹಿಳೆ ಜೊತೆ ಲೀವಿಂಗ್ ಟುಗೆದರ್‍ನಲ್ಲಿ ಇದ್ದನು. ಈಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರು ಪ್ರತಾಪ್ ನಗರದಲ್ಲಿರುವ ಬಾಡಿಗೆ ಫ್ಲ್ಯಾಟ್‍ನಲ್ಲಿ ವಾಸಿಸುತ್ತಿದ್ದರು.
ವಿವಾಹಿತ ಮಹಿಳೆಯು ಎರಡು ವರ್ಷಗಳ ಹಿಂದೆ ಮೊಹ್ಸಿನ್ ಜೊತೆ ತನ್ನ ಗಂಡನನ್ನು ತೊರೆದು ಅವನೊಟ್ಟಿಗೆ ಬಂದಿದ್ದಳು. ಆದರೆ ಆಕೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ತದ ನಂತರ ಜೈಪುರದಲ್ಲಿರುವುದಾಗಿ ಮಾಹಿತಿ ದೊರೆತಿದೆ ಎಂದು ಪೊಲೀಸರು ಹೇಳಿದರು.
ಡಿಸೆಂಬರ್ 12ರ ಭಾನುವಾರ ಮಹಿಳೆಯ ಪತಿಯು ಪ್ರತಾಪ್ ನಗರದಲ್ಲಿದ್ದ ಪ್ರಿಯಕರನ ಮನೆಗೆ ಬಂದನು. ಪತಿಯನ್ನು ಕಂಡು ಗಬರಿಯಾದ ಮೊಹ್ಸಿನ್ ಐದನೇ ಮಹಡಿಯ ಬಾಲ್ಕನಿಯಿಂದ ಹಾರಿದ್ದಾನೆ. ತಕ್ಷಣವೇ ಎಸ್‍ಎಂಎಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದರು ಎಂದು ಪ್ರತಾಪ್ ನಗರ ಪೊಲೀಸ್ ಠಾಣಾಧಿಕಾರಿ ಅಧಿಕಾರಿ ಬಲ್ವೀರ್ ಸಿಂಗ್ ತಿಳಿಸಿದ್ದಾರೆ.