ಲಖನೌ: ಸಮಾಜವಾದಿ ಪಕ್ಷದ ಕೆಂಪು ಟೋಪಿ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಸ್ ಪಿ ಮುಖಂಡ ಅಖಿಲೇಶ್ ಯಾದವ್, ಕೆಂಪು ಟೋಪಿಗಳು ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್ ಅಗಿವೆ ಎಂದು ಹೇಳಿದ್ದಾರೆ.
ತಮ್ಮ ಪಕ್ಷದ ಸದಸ್ಯರ ಟ್ರೇಡ್‌ಮಾರ್ಕ್ ಕೆಂಪು ಟೋಪಿಗಳನ್ನು ಧರಿಸಿರುವ ಜನರು ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಕಾರಣ ಬಿಜೆಪಿಗೂ "ರೆಡ್ ಅಲರ್ಟ್" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ.
ಗೋರಖ್‌ಪುರದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, 'ಇಂದು ಉತ್ತರ ಪ್ರದೇಶದಲ್ಲಿ ಕೆಂಪು ಟೋಪಿ ಧರಿಸಿರುವವರು ಕೆಂಪು ದೀಪದ('ಲಾಲ್ ಬತ್ತಿ') ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಅವರು ನಿಮ್ಮ ನೋವು ಮತ್ತು ದುಃಖಗಳ ಬಗ್ಗೆ ಚಿಂತಿಸುವುದಿಲ್ಲ. ಕೆಂಪು ಟೋಪಿ ಜನರು ಹಗರಣಗಳನ್ನು ಮಾಡಲು, ತಮ್ಮ ಬೊಕ್ಕಸವನ್ನು ತುಂಬಿಕೊಳ್ಳಲು, ಅಕ್ರಮವಾಗಿ (ಸಂಪನ್ಮೂಲಗಳನ್ನು) ದೋಚಲು ಮತ್ತು ಮಾಫಿಯಾಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲು ಅಧಿಕಾರ ಬಯಸುತ್ತಿದ್ದಾರೆ. ರೆಡ್ ಕ್ಯಾಪ್ ಜನರು ಭಯೋತ್ಪಾದಕರ ಪರವಾಗಿ ಕೆಲಸ ಮಾಡಲು ಮತ್ತು ಅವರನ್ನು ಜೈಲಿನಿಂದ ಮುಕ್ತಗೊಳಿಸಲು ಸರ್ಕಾರ ರಚಿಸಲು ಬಯಸುತ್ತಾರೆ. ಆದ್ದರಿಂದ, ಕೆಂಪು ಟೋಪಿ ಧರಿಸುವವರು ಉತ್ತರ ಪ್ರದೇಶ ರೆಡ್ ಅಲರ್ಟ್ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇದು ಎಚ್ಚರಿಕೆಯ ಗಂಟೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಟ್ವಿಟರ್ ಮೂಲಕ ತಿರುಗೇಟು ನೀಡಿರುವ ಅಖಿಲೇಶ್ ಯಾದವ್, 'ಬಿಜೆಪಿಗೆ ಕೆಂಪು ಟೋಪಿ ಜೊತೆಗೆ ಹಣದುಬ್ಬರ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ದುಃಸ್ಥಿತಿ, ಹತ್ರಾಸ್ ಮತ್ತು ಲಖಿಂಪುರ ಖೇರಿ (ಘಟನೆಗಳು) ಮಹಿಳೆಯರು ಮತ್ತು ಯುವಕರ ದಬ್ಬಾಳಿಕೆ, ನಾಶವಾದ ಶಿಕ್ಷಣ ವ್ಯವಸ್ಥೆ, ವ್ಯಾಪಾರ ಮತ್ತು ಆರೋಗ್ಯದ ಬಗ್ಗೆ ರೆಡ್ ಅಲರ್ಟ್ ಇದೆ. ಇದು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ, '2022 ರಲ್ಲಿ ಕೆಂಪು ಮತ್ತು ಬದಲಾವಣೆಯ 'ಇಂಕ್ವಿಲಾಬ್' (ಕ್ರಾಂತಿ) ಇರುತ್ತದೆ ಎಂದು ಟೀಕಿಸಿದ್ದಾರೆ.