ಜಿನಿವಾ: ಓಮಿಕ್ರಾನ್ ಸುನಾಮಿ ಮತ್ತು ಡೆಲ್ಟಾ ಕೋವಿಡ್ -19 ಪ್ರಕರಣಗಳು ಈಗಾಗಲೇ ತಮ್ಮ ಮಿತಿಯನ್ನು ಮೀರಿದ್ದು, ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹಾಕಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಸಿದೆ.
ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಅವಳಿ ಬೆದರಿಕೆಗಳು ಎಂದು ಡಬ್ಲ್ಯುಎಚ್‌ಒ ಕಳವಳ ವ್ಯಕ್ತಪಡಿಸಿದ್ದು, ಇದು ಹೊಸ ಪ್ರಕರಣಗಳ ಸಂಖ್ಯೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಿದ್ದು, ಇದು ಆಸ್ಪತ್ರೆಗೆ ದಾಖಲಾಗುವವರು ಮತ್ತು ಸಾವುಗಳಲ್ಲಿ ಏರಿಕೆಗೆ ಕಾರಣವಾಗುತ್ತದೆ ಎಂದು ಹೇಳಿದೆ.
ಡೆಲ್ಟಾದಂತೆಯೇ ಓಮಿಕ್ರಾನ್ ಹೆಚ್ಚಾಗಿ ಹರಡುತ್ತದೆ. ಇದು ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂಬ ತೀವ್ರ ಕಳವಳ ಹೊಂದಿರುವುದಾಗಿ ಡಬ್ಲ್ಯೂಎಚ್ ಒ ಮುಖ್ಯಸ್ಛ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗೋಷ್ಛಿಯಲ್ಲಿ ತಿಳಿಸಿದರು.
ಇದು ಆರೋಗ್ಯ ಕಾರ್ಯಕರ್ತರು ಮತ್ತು ಕುಸಿತದ ಅಂಚಿನಲ್ಲಿರುವ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಒತ್ತಡವನ್ನು ಮುಂದುವರೆಸಲಿದೆ ಎಂದು ಅವರು ಹೇಳಿದ್ದಾರೆ. ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವು ಹೊಸ ಕರೋನವೈರಸ್ ರೋಗಿಗಳಿಗೆ ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಕೋವಿಡ್‌ನಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಅವರು ಹೇಳಿದರು. ಲಸಿಕೆ ಹಾಕಿಸಿಕೊಳ್ಳದ ಅನೇಕ ಜನರು ಈ ಸೋಂಕಿನಿಂದ ಸಾಯುವ ಪರಿಸ್ಥಿತಿ ಹೆಚ್ಚಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.