ನವದೆಹಲಿ: ದೇಶದ ಕೆಲವೆಡೆ ಕೊರೊನಾ ರೂಪಾಂತರಿ ತಳಿಯಾದ ಒಮಿಕ್ರಾನ್ ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆಯೊಂದನ್ನು ಹೊರಡಿಸಿದೆ. ಅದರಂತೆ ಒಮಿಕ್ರಾನ್ ಸೋಂಕಿತರನ್ನು ನಿರ್ದಿಷ್ಟ ಕೋವಿಡ್ ಚಿಕಿತ್ಸಾ ಸೌಕರ್ಯ ಇರುವ ಹಾಗೂ ಕ್ವಾರಂಟೈನ್ ಮಾಡಲು ವ್ಯವಸ್ಥೆ ಇರುವಲ್ಲಿಯೇ ಚಿಕಿತ್ಸೆ ನೀಡಬೇಕೆಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಒಮಿಕ್ರಾನ್ ಚಿಕಿತ್ಸೆ ವೇಳೆ ಆರೋಗ್ಯ ಸಂಬಂಧಿ ಹಾಗೂ ಇತರೆ ರೋಗಿಗಳಿಗೆ ಒಮಿಕ್ರಾನ್ ಹರಡದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕಾಗಿಯೂ ಹೇಳಲಾಗಿದೆ.
ಅಲ್ಲದೆ ಒಮಿಕ್ರಾನ್ ಪತ್ತೆಯಾದವರನ್ನು ಆದಷ್ಟು ಬೇಗನೆ ಟ್ರ್ಯಾಕ್ ಮಾಡಿ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಟ್ರೇಸ್ ಮಾಡಿ ಶುರುವಿನಲ್ಲಿಯೇ ಒಮಿಕ್ರಾನ್ ಹರಡುವುದನ್ನು ತಡೆಗಟ್ಟಬೇಕು ಎಂದೂ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಮುಖೇನ ಸೂಚನೆ ನೀಡಿದೆ.