ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿ ಕುಟುಂಬಶ್ರೀ ಹಾಲ್‍ನಲ್ಲಿ ಜಲಜೀವನ್ ಮಿಷನ್‍ನ ಕಾರ್ಯಾಗಾರವು ಇತ್ತೀಚೆಗೆ ಜರಗಿತು.
ಸತ್ಯಸಾಯಿ ಓರ್ಫನೇಜ್ ಟ್ರಸ್ಟ್ ನಿರ್ವಹಣಾ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆಯ ವಿವರಣೆ ಹಾಗೂ ಅನುಷ್ಠಾನದ ಬಗ್ಗೆ ಪಂಚಾಯತಿ ಮಟ್ಟದಲ್ಲಿ ಈ ಕಾರ್ಯಾಗಾರವು ನಡೆಯಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಯಂ. ಅಧ್ಯಕ್ಷತೆ ವಹಿಸಿದ್ದರು. ಜಲಜೀವನ್ ಮಿಷನ್‍ನ ಟೀಂ ಲೀಡರ್ ನಿತಿನ್ ಕೆ., ಜಲಜೀವನ್ ಮಿಷನ್‍ನ ಯೋಜನೆಯ ಬಗ್ಗೆ ವಿವರಣೆ ನೀಡಿದರು. ವಿಷ್ಣು ಪೆರಿಯ ಅವರು ಜಲಜೀವನ್ ಯೋಜನೆಯ ಐ.ಎಸ್.ಎ. ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಕೇರಳ ಜಲಮಂಡಳಿಯ ಸಹಾಯಕ ಅಭಿಯಂತರ ಪದ್ಮನಾಭ ವಾಟರ್ ಅಥೋರಿಟಿ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತಿ ಕಾರ್ಯದರ್ಶಿ, ಎಸ್.ಸಿ./ಎಸ್.ಟಿ.ಪ್ರೊಮೋಟರ್‍ಗಳು, ಅಂಗನವಾಡಿ ಕಾರ್ಯಕರ್ತೆಯರು, ಕುಟುಂಬಶ್ರೀ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.