ಕಾಸರಗೋಡು: ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದಾಗಿ ಉತ್ತಮ ಎನ್ನೆಸ್ಸೆಸ್ ಸ್ವಯಂಸೇವಕ ಪ್ರಶಸ್ತಿ ವಿಜೇತ, ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕ ಮಹೇಶ್ ಏತಡ್ಕ ತಿಳಿಸಿದ್ದಾರೆ.
ಅವರು ಬೇಳ ಸೈಂಟ್ ಮೇರಿಸ್ ಕಾಲೇಜಿನ ಎನ್ನೆಸ್ಸೆಸ್ ಘಟಕ ವತಿಯಿಂದ ಎಡಪರಂಬದಲ್ಲಿ ನಡೆದ ಸಪ್ತ ದಿನ ಶಿಬಿರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಮೂಡಿಸುವಲ್ಲಿ ಎನ್ನೆಸ್ಸೆಸ್ ಸಹಕಾರಿಯಾಗಿದ್ದು, ರಕ್ತದಾನಂತಹ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದರು. ಅವರು ವಿವಿಧ ಗೇಮ್‍ಗಳ ಮೂಲಕ ಕೆಲವೊಂದು ಚಟುವಟಿಕೆಗಳನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಅನೂಪ್, ಶೈನಿ, ಪ್ರೀತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿಲ್ಪಾಶ್ರೀ ಸ್ವಾಗತಿಸಿದರು. ಕೃಷ್ಣ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಅನುವಿಕ ವಂದಿಸಿದರು.