ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಿಲುವು ಮತ್ತಷ್ಟು ದೃqsಗಂಡಿದೆ. ಕುಲಪತಿಯಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ಪುನರುಚ್ಚರಿಸಿರುವರು. ಕುಲಪತಿಗಳ ಸ್ಥಾನಮಾನ ಮತ್ತು ಹಕ್ಕುಗಳನ್ನು ಪೆÇ್ರ ಚಾನ್ಸಲರ್‍ಗೆ ನೀಡಲು ಅವರು ಸಿದ್ಧರಾಗಿದ್ದಾರೆ.
ತನ್ನ ಕಡೆಯಿಂದ ವೈಫಲ್ಯವಾಗಿದೆ ಎಂದು ಹೇಳುವವರು ಮತ್ತೆ ಆ ಸ್ಥಾನವನ್ನು ಅಲಂಕರಿಸಲು ಏಕೆ ಒತ್ತಾಯಿಸುತ್ತಾರೆ ಎಂದು ಅವರು ಕೇಳಿದರು.ವಿಶ್ವವಿದ್ಯಾಲಯಗಳು ಮತ್ತು ಸರ್ಕಾರದ ಕಡೆಯಿಂದ ಅನೇಕ ವೈಫಲ್ಯಗಳಿವೆ. ಹಾಗೆಂದು ಬಹಿರಂಗವಾಗಿ ಹೇಳಿಲ್ಲ, ಟೀಕೆಗೂ ಮಿತಿ ಇದೆ ಎಂದು ತಿಳಿಸಿದರು.
ಪಕ್ಷಗಳು ಮತ್ತು ಯುವ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವುದು ಸೌಜನ್ಯವಲ್ಲ ಎಂದರು. ಶ್ರೀನಾರಾಯಣ ಗುರು ವಿಶ್ವವಿದ್ಯಾನಿಲಯಕ್ಕೆ ಅನುಮತಿ ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಮನ ಸೆಳೆದರು.
ಕಣ್ಣೂರು ವಿಶ್ವವಿದ್ಯಾನಿಲಯ ನೇಮಕಾತಿಗೆ ಸಂಬಂಧಿಸಿದ ದೂರುಗಳ ಕುರಿತು ಹೈಕೋರ್ಟ್ ಕಳುಹಿಸಿದ್ದ ನೋಟಿಸ್ ಸ್ವೀಕರಿಸಲು ರಾಜ್ಯಪಾಲರು ನಿರಾಕರಿಸಿದ್ದರು.