ಬೆಳಗ್ಗೆ ಎದ್ದಾಗ ಸುರಿಯುವ ಮಂಜು ನೋಡುವುದೇ ಆನಂದ... ಚುಮು-ಚುಮು ಚಳಿಯಲ್ಲಿ ಬೆಚ್ಚನೆಯ ಸ್ವೆಟರ್ ಅಥವಾ ಜರ್ಕಿನ್ ಹಾಕಿ, ತಲೆಗೆ ಮಪ್ಲರ್ ಸುತ್ತಿ ನಡೆದಾಡುವ ಆನಂದ ಸಿಗುವುದು ಚಳಿಗಾಲದಲ್ಲೇ, ಆದರೆ ಬೇಸರದ ಸಂಗತಿ ಅಂದ್ರೆ ಚಳಿಗಾಲ ಬಂತೆಂದರೆ ತ್ವಚೆಗೆ ಆಗಿ ಬರಲ್ಲ, ತ್ವಚೆ ಒಡೆಯಲು ಪ್ರಾರಂಭಿಸುತ್ತದೆ, ಇನ್ನು ಒಣ ತ್ವಚೆ ಇದ್ದರಂತೂ ಹೇಳುವುದೇ ಬೇಡ, ಪಾದಗಳು, ಕಾಲುಗಳು, ಅಂಗೈ ಒಡೆದು ರಕ್ತ ಬರಲಾರಂಭಿಸುತ್ತದೆ. ತುಟಿಗಳು ಒಡೆಯುವುದು, ಕೆನ್ನೆ ಒಡೆದು ನಗುವಾಗ ಒಂಥರಾ ಕಿರಿಕಿರಿ ಅನಿಸುವುದು. ಆದರೆ ನಾವಿಲ್ಲಿ ಈ ಚಳಿಗಾಲದಲ್ಲಿ ಈ ಕಿರಿಕಿರಿ ಏನೂ ಅನುಭವಿಸದೆ ಚಳಿಗಾಲವನ್ನು ಎಂಜಾಯ್ ಮಾಡಲು ಟಿಪ್ಸ್. ನಾವು ನೀಡಿರುವ ಸೌಂದರ್ಯ ಟಿಪ್ಸ್ ಪಾಲಿಸಿದರೆ ಹೆಚ್ಚು ಹಣವೂ ಖರ್ಚಾಗಲ್ಲ, ತ್ವಚೆ ಮೃದುವಾಗಿ ಇರುತ್ತದೆ, ಹೇಗೆ ಎಂದು ನೋಡೋಣ ಬನ್ನಿ...
ಚಳಿಗಾಲಕ್ಕೆ ಬೆಸ್ಟ್ ಗ್ಲಿಸರಿನ್... ಗ್ಲಿಸರಿನ್ ಗ್ಲಿಸರಿನ್ ಅಂಟು-ಅಂಟಾಗಿ ಅನುಸುವುದರಿಂದ ಗ್ಲಿಸರಿನ್ ಹಚ್ಚಲು ಇಷ್ಟವಾಗಲ್ಲ, ಆದರೆ ಗ್ಲಿಸರಿನ್ ಚಳಿಗಾಲದಲ್ಲಿ ತ್ವಚೆ ಆರೈಕೆಯಲ್ಲಿ ಸೂಪರ್. ಆದರೆ ಗ್ಲಿಸರಿನ್ ಅನ್ನು ಅಂಟು-ಟಂಟಾಗಿ ಇರದಂತೆ ಬಳಸುವುದು ಹೇಗೆ ಟ್ರಿಕ್ಸ್ ಇಲ್ಲಿದೆ ನೋಡಿ.
ಗ್ಲಿಸರಿನ್ ಸೆರಮ್ ಮಾಡುವುದು ಹೇಗೆ?ಸ್ಟೆಪ್ 1: ಒಂದು ಬೌಲ್‌ನಲ್ಲಿ ಎಲ್ಲಾ ಸಾಮಗ್ರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಸ್ಟೆಪ್ 2: ಈಗ ಮಿಶ್ರಣ ಮಾಡಿದ ಸೆರಮ್ ಅನ್ನು ಬಾಟಲಿನಲ್ಲಿ ಹಾಕಿ ಮುಚ್ಚಳ ಹಾಕಿ ತಂಪಾದ ಸ್ಥಳ (ರೂಮ್ ಉಷ್ಣತೆಯಲ್ಲಿ) ಇಡಿ.
ಸ್ನಾನ ಮಾಡುವ ಮುಂಚೆ ಹಾಗೂ ಮಲಗುವ ಮುಂಚೆ ಹಚ್ಚಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ.