ಪಾಟ್ನಾ: ಬಿಹಾರದ ಹಿರಿಯ ಸಮಾಜವಾದಿ ನಾಯಕ ಶಿವಾನಂದ ತಿವಾರಿ ಅವರೆ ಫೋನ್ ಕರೆ ಮಾಡಿದ ದುಷ್ಕರ್ಮಿಯೋರ್ವ ನಿಂದಿಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.
ಶಿವಾನಂದ ತಿವಾರಿ ಅವರು ಇತ್ತೀಚಿಗಷ್ಟೆ ಪತ್ರಿಕಾ ಸಂದರ್ಶನವೊಂದರಲ್ಲಿ ವಿ.ಡಿ ಸಾವರ್ಕರ್ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಸಾವರ್ಕರ್ ಅವರಿಗೆ ಗೋವನ್ನು ಪೂಜಿಸುವ ಪರಿಕಲ್ಪನೆ ಸುತಾರಾಂ ಇಷ್ಟವಿರಲಿಲ್ಲ ಎಂದಿದ್ದರು.
ಶಿವಾನಂದ ತಿವಾರಿ ಅವರು ಜಯಪ್ರಕಾಶ್ ನಾರಾಯಣ್ ಹಾಗೂ ರಾಮಮನೋಹರ್ ಲೋಹಿಯ ಥರದ ಮಹಾನ್ ನಾಯಕರೊಡನೆ ಅವರೊಂದಿಗೆ ಕೆಲಸ ಮಾಡಿದವರು. ಸದ್ಯ ಅವರು ಆರ್ ಜೆ ಡಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.