ತಿರುವನಂತಪುರ: ರಾಜ್ಯದಲ್ಲಿ ಓಮಿಕ್ರಾನ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ನಾಲ್ಕು ಹೊಸ ಪ್ರಕರಣಗಳು ಬುಧವಾರ ದೃಢಪಟ್ಟಿವೆ. ಇದು ಒಮಿಕ್ರಾನ್ ಬಾಧಿತರ ಒಟ್ಟು ಸಂಖ್ಯೆಯನ್ನು ಐದಕ್ಕೆ ಏರಿಕೆ ಕಂಡಿದೆ.
ನಾಲ್ವರಲ್ಲಿ ಇಬ್ಬರು ಸಂಪರ್ಕ ರೋಗಿಗಳು. ಎರ್ನಾಕುಳಂ ನಿವಾಸಿಯೊಬ್ಬರ ಪತ್ನಿ ಮತ್ತು ಅತ್ತೆಯಲ್ಲಿ ಈ ಸೋಂಕನ್ನು ಮೊದಲು ಪತ್ತೆ ಮಾಡಲಾಗಿತ್ತು. ಇದಲ್ಲದೆ, ಯುಕೆ ಮತ್ತು ಕಾಂಗೋÀದಿಂದ ಆಗಮಿಸಿದ ಜನರಲ್ಲೂ ಈ ಕಾಯಿಲೆ ದೃಢ|ಪಟ್ಟಿದೆ. ಇವರಲ್ಲಿ ಯುಕೆಯಿಂದ ಬಂದವರು ತಿರುವನಂತಪುರದವರು ಮತ್ತು ಕಾಂಗೋದವರು ಎರ್ನಾಕುಳಂ ನಿವಾಸಿ.
ಎರ್ನಾಕುಳಂ ನಿವಾಸಿಗೆ ಒಮಿಕ್ರಾನ್ ದೃಢಪಟ್ಟ ನಂತರ ಪತ್ನಿ ಮತ್ತು ಅತ್ತೆಗೆ ಕೊರೋನಾ ದೃಢಪಟ್ಟಿದೆ. ನಂತರ ಆನುವಂಶಿಕ ಪರೀಕ್ಷೆಗೆ ಕಳುಹಿಸಲಾದ ಫಲಿತಾಂಶಗಳಲ್ಲಿ ಓಮಿಕ್ರಾನ್ ಕಂಡುಬಂದಿದೆ. ಇವರೊಂದಿಗೆ ಸಂಪರ್ಕಕ್ಕೆ ಬಂದವರ ಪಟ್ಟಿಯನ್ನು ಆರೋಗ್ಯ ಇಲಾಖೆ ತಯಾರಿಸಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಮಾಹಿತಿಯನ್ನು ನೀಡಿರುವರು. ರೋಗ ಪತ್ತೆಯಾದ ಎಲ್ಲರಿಗೂ ಲಸಿಕೆ ಹಾಕಲಾಗಿದೆ. ಪ್ರಸ್ತುತ ಆತಂಕಕ್ಕೆ ಕಾರಣವಿಲ್ಲ ಮತ್ತು ಎಚ್ಚರಿಕೆ ವಹಿಸಬೇಕು ಎಂದು ವೀಣಾ ಜಾರ್ಜ್ ಹೇಳಿರುವರು.