ಕೊಚ್ಚಿ: ಇಸ್ಲಾಂ ತೊರೆದವರು ಹೊಸ ಸಂಘಟನೆಯೊಂದಕ್ಕೆ ರೂಪು ನೀಡಿರುವರು. ಎಕ್ಸ್ ಮುಸ್ಲಿಂಸ್ ಆಫ್ ಕೇರಳ ಎಂಬ ಹೆಸರಿನಲ್ಲಿ ಈ ಸಂಘಟನೆಯನ್ನು ರಚಿಸಲಾಗಿದೆ. ಹೊಸ ಸಂಸ್ಥೆಯು ಅಧಿಕೃತವಾಗಿ ಫೇಸ್‍ಬುಕ್ ಪುಟದ ಮೂಲಕ ನೋಂದಣಿ ಸಂಖ್ಯೆಯ ಏಐಒ / ಖಿಅ / 471/2021 ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇಸ್ಲಾಂ ವಿಮರ್ಶಕ, ವಿಚಾರವಾದಿ ಸಿ.ಎಂ.ಲಿಯಾಖತ್ ಅಲಿ ಅಧ್ಯಕ್ಷ ತೆ ವಹಿಸಿರುವ ಸಂಸ್ಥೆ, ಕಾರ್ಯದರ್ಶಿ ಪಿ.ಎಂ.ಸಫಿಯಾ ಹಾಗೂ ಆಯಿಷಾ ಮಕೆರಸ್ ಎಂಬವರು ಖಜಾಂಜಿಯಾಗಿದ್ದಾರೆ.
ಗುಂಪಿನ ಬಹುಪಾಲು ಜನರು "ಇಸ್ಲಾಂನಲ್ಲಿ ಮೂಢನಂಬಿಕೆ ಮತ್ತು ಅವೈಜ್ಞಾನಿಕ ನಂಬಿಕೆಗಳನ್ನು" ಉಲ್ಲೇಖಿಸಿ ಇಸ್ಲಾಂಗೆ ವಿದಾಯ ಹೇಳಿರುವರು ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ, ಕೇರಳದಲ್ಲಿ ಇಸ್ಲಾಂಗೆ ಮತಾಂತರಗೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಧರ್ಮವಿಲ್ಲದೆ ಬದುಕುವ ಮೂಲಭೂತ ಮಾನವ ಹಕ್ಕನ್ನು ರಕ್ಷಿಸುವುದು ಮತ್ತು ತೊರೆದು ಹೋಗುವುದಾಗಿ ಪ್ರತಿಪಾದಿಸುವ ಜನರನ್ನು ಭಾವನಾತ್ಮಕವಾಗಿ ಮತ್ತು ನೈತಿಕವಾಗಿ ಬೆಂಬಲಿಸುವುದು ತನ್ನ ಗುರಿಯಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ.
ಇಸ್ಲಾಮಿನ ಟೀಕೆ ಮತ್ತು ವೈಚಾರಿಕತೆಯ ಹರಡುವಿಕೆಯು ಸಂಘಟನೆಯ ಪದಾಧಿಕಾರಿಗಳ ಸೇರಿದಂತೆ ಸದಸ್ಯರಿಗೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆಗಳು ವ್ಯಕ್ತಗೊಂಡಿದೆ. ಕ್ಲಬ್ ಹೌಸ್ ಚರ್ಚೆಗಳಲ್ಲಿ ನಡೆದ ವಾದ-ವಿವಾದಗಳ ಬಳಿಕ ಇಸ್ಲಾಂ ವಿಮರ್ಶಕಿಯಾದ ಜಸ್ಲಾ ಮಡಶ್ಚೇರಿ ಅವರ ವಿರುದ್ದ ಕೊಲೆ ಬೆದರಿಕೆಗಳು ವ್ಯಾಪಕವಾಗಿ ವ್ಯಕ್ತಗೊಂಡಿದ್ದವು. ಎಕ್ಸ್ ಮುಸ್ಲಿಂ ಎಂಬ ಫೇಸ್ ಬುಕ್ ಪುಟದಲ್ಲೂ ಇಸ್ಲಾಂ ಧರ್ಮದ ಟೀಕೆಗಳು ಇತ್ತೀಚೆಗೆ ಹೆಚ್ಚಿವೆ. ಫ|ಏಸ್ ಬುಕ್ ಗುಂಪಿನ ಮೂಲಕ ಅನೇಕ ಮಂದಿ ಈಗಾಗಲೇ ಎಕ್ಸ್ ಮುಸ್ಲಿಂ ಸದಸ್ಯರಾಗುತ್ತಿರುವುದು ಉಲ್ಲೇಖಾರ್ಹ.