ನವದೆಹಲಿ: ಕೇರಳದ ಅಭಿವೃದ್ಧಿ ಚಟುವಟಿಕೆಗಳನ್ನು ಹಾಳು ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸಬಾರದು ಎಂದು ಸಂಸದ ಎ.ಎಂ.ಆರಿಫ್ ಹೇಳಿದ್ದಾರೆ. ಕೆ ರೈಲು ಯೋಜನೆಗೆ ಹಣ ಮಂಜೂರು ಮಾಡಲು ಕೇಂದ್ರ ನಿರಾಕರಿಸಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಅಡ್ಡಿಪಡಿಸುತ್ತಿದೆ ಎಂದು ಆರಿಫ್ ಲೋಕಸಭೆಯಲ್ಲಿ ಆರೋಪಿಸಿದರು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಸಿಲ್ವರ್ ಲೈನ್ ಯೋಜನೆ ನಿರ್ಮಾಣದ ಒಪ್ಪಂದದಿಂದ ಕೇಂದ್ರ ಸರ್ಕಾರ ಈಗ ಹಿಂದೆ ಸರಿಯುತ್ತಿದೆ. ಈ ಯೋಜನೆಗೆ ಅಗತ್ಯವಾದ ಹಣಕಾಸಿನ ನೆರವು ನೀಡುವುದಿಲ್ಲ ಎಂದಿದೆ. ಇದು ತಿರುವನಂತಪುರದಿಂದ ಕಾಸರಗೋಡಿಗೆ ನಾಲ್ಕು ಗಂಟೆಗಳಲ್ಲಿ ಪ್ರಯಾಣಿಸುವ ವಿಶಿಷ್ಟ ವ್ಯವಸ್ಥೆಯಾಗಿದೆ.
ಪಿಣರಾಯಿ ಸರ್ಕಾರ ಕೇರಳವನ್ನು ಆಧುನೀಕರಿಸಿ ಉತ್ತಮ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅಭಿವೃದ್ಧಿ ಚಟುವಟಿಕೆಗಳನ್ನು ಹಾಳು ಮಾಡುವ ಪ್ರಯತ್ನ ಮಾಡಬಾರದು.
ಕೆ ರೈಲು, ಶಬರಿಮಲೆ ವಿಮಾನ ನಿಲ್ದಾಣ ಯೋಜನೆ ಮತ್ತು ತಿರುವನಂತಪುರಂ-ಚೆಂಗನ್ನೂರು ಸಬ್ ಅರ್ಬನ್ ರೈಲು ಯೋಜನೆ ಸೇರಿದಂತೆ ಕೇರಳದ ಇತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೇಂದ್ರವು ತನ್ನ ಧೋರಣೆಯನ್ನು ಬದಲಾಯಿಸಬೇಕು ಎಂದು ಆರಿಫ್ ಹೇಳಿದರು.