ತಿರುವನಂತಪುರ: ವೇತನ ಪರಿಷ್ಕರಣೆ, ಸವಲತ್ತುಗಳು ಮತ್ತು ಬಡ್ತಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ವೈದ್ಯರ ಸಂಘಟನೆಯಾದ ಕೆಜಿಎಂಒಎ ಸೆಕ್ರೆಟರಿಯೇಟ್ ಮೆಟ್ಟಲಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ. ನವೆಂಬರ್ 1ರಂದು ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ವಿರೋಧಿಸಿ ಧರಣಿ ಆರಂಭಿಸಲಾಗಿದೆ.
ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ವಿವಿಧ ಜಿಲ್ಲೆಗಳ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಷ್ಕರವು ರೋಗಿಗಳ ಆರೈಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದೇಶವಿದ್ದರೂ ಪರಿಷ್ಕøತ ವೇತನ ನೀಡದ ಹಿನ್ನೆಲೆಯಲ್ಲಿ ವೈದ್ಯಕೀಯ ಕಾಲೇಜು ವೈದ್ಯರೂ ಅಸಹಕಾರ ಮುಷ್ಕರ ನಡೆಸುತ್ತಿದ್ದಾರೆ. ವಿಐಪಿ ಕರ್ತವ್ಯ ಸೇರಿದಂತೆ ಮುಷ್ಕರದಲ್ಲಿಎಲ್ಲಾ ವಿಭಾಗದವರೂ ಪಾಲ್ಗೊಳ್ಳುತ್ತಿರುವರು.
ನ.1ರಂದು ವೈದ್ಯರು ಮುಷ್ಕರ ನಡೆಸಿದಾಗ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಒಂದು ತಿಂಗಳು ಕಳೆದರೂ ಯಾವುದೇ ಕ್ರಮಕೈಗೊಳ್ಳದೆ ಇದ್ದರ ಕಾರಣ ಮುಷ್ಕರ ಪುನರಾರಂಭವಾಯಿತು. ತಡೆಹಿಡಿಯಲಾದ ಭತ್ಯೆಗಳನ್ನು ಅನುಮತಿಸಿ ಮತ್ತು ಕಡಿಮೆಯಾದ ಮೂಲ ವೇತನವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಲಾಗಿದೆ. ಕೊರೋನಾ ಮತ್ತು ನಿಪ್ಪಾ ಹೋರಾಟಗಾರರಿಗೆ ಅಪಾಯ ಭತ್ಯೆ ನೀಡುವಂತೆ ವೈದ್ಯರು ಒತ್ತಾಯಿಸುತ್ತಿದ್ದಾರೆ.
ವೇತನ ಸುಧಾರಣೆಯಿಂದ ಆರಂಭಿಕರ ವೇತನ ಸುಮಾರು 10,000 ರೂ. ಸಕಾಲದಲ್ಲಿ ಉನ್ನತ ದರ್ಜೆ ನೀಡುವಲ್ಲಿ ಹೊಸ ಆದೇಶ ಹೊರಡಿಸಿಲ್ಲ. ಹಲವು ಭತ್ಯೆಗಳನ್ನು ಪರಿಷ್ಕರಿಸಿಲ್ಲ. ಕೆಎಸ್‍ಎ ಸೇರಿದಂತೆ ಹೆಚ್ಚಿನ ವೇತನ ನೀಡುವ ವಿಚಾರದಲ್ಲಿ ಸರ್ಕಾರ ವೈದ್ಯರೊಂದಿಗೆ ವಿಭಿನ್ನ ಧೋರಣೆ ಅನುಸರಿಸುತ್ತಿದೆ ಎಂದು ಕೆಜಿಎಂಒಎ ಮುಖಂಡರು ಹೇಳಿದರು.
ಮುಷ್ಕರ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಆದರೆ ಬೇಡಿಕೆಗಳಿಗೆ ಮನ್ನಣೆ ನೀಡದೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೆಲ ದಿನಗಳಿಂದ ಸರಕಾರದಿಂದ ಕೇವಲ ಚರ್ಚೆ, ಭರವಸೆ ಮಾತ್ರ ಸಿಗುತ್ತಿದೆ ಎಂದು ಕೆಜಿಎಂಒಎ ಹೇಳಿದೆ.