ಕಣ್ಣೂರು: ಸಮಾಜದಲ್ಲಿ ಕೋಮುವಾದವನ್ನು ಹರಡಲು ಮುಸ್ಲಿಂ ಲೀಗ್ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ಯುಡಿಎಫ್‍ನಲ್ಲಿ ಲೀಗ್ ತನ್ನದೇ ಹೆಚ್ಚುಗಾರಿಕೆ ಎಂದು ಲೀಗ್ ಕೆಲವೊಮ್ಮೆ ಭಾವಿಸುತ್ತದೆ. ವಕ್ಫ್ ಮುಸ್ಲಿಂರಿಗೆ ಏನೋ ತೊಂದರೆ ಆಗುತ್ತಿದೆ ಎಂಬ ತಪ್ಪು ಭಾವನೆ ಮೂಡಿಸಲು ಯತ್ನಿಸುತ್ತಿದೆ ಎಂದು ಸಿಎಂ ಆರೋಪಿಸಿದರು.ಇದಕ್ಕಾಗಿಯೇ ಲೀಗ್ ವಿಶೇಷ ಸಭೆ ಕರೆದಿದೆ ಎಂದು ಸಿಎಂ ಆರೋಪಿಸಿದರು.
ವಕ್ಫ್ ನೇಮಕಾತಿ ವಿಚಾರದಲ್ಲಿ ಸರಕಾರ ಒತ್ತಾಯ ಮಾಡಿಲ್ಲ. ಹಾಗಾಗಿಯೇ ನಿಧಾನವಾಗಿ ಚರ್ಚಿಸಿದರೆ ಸಾಕು ಎಂದು ತೀರ್ಮಾನಿಸಲಾಯಿತು. ಇದನ್ನು ಸಮಸ್ತದ ಎರಡು ಬಣಗಳು ಮತ್ತು ಮುಜಾಹಿದೀನ್‍ಗಳ ಒಂದು ಬಣ ಅನುಮೋದಿಸಿತು. ಇದನ್ನು ಲೀಗ್ ಮಾತ್ರ ಒಪ್ಪಿಕೊಳ್ಳುತ್ತಿಲ್ಲ ಎಂದು ಸಿಎಂ ಹೇಳಿದರು.
ಯುಡಿಎಫ್‍ನಲ್ಲಿ ಮುಸ್ಲಿಂ ಲೀಗ್ ಮೊದಲ ಪಕ್ಷ ಎಂದು ಅವರು ಕೆಲವೊಮ್ಮೆ ಭಾವಿಸುತ್ತಾರೆ. ಕೇರಳದ ಎಲ್‍ಡಿಎಫ್ ಸರ್ಕಾರದ ಅಡಿಯಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎಂದು ಬಿಂಬಿಸಲು ಲೀಗ್ ಪ್ರಯತ್ನಿಸುತ್ತಿದೆ. ಮುಸ್ಲಿಮರ ಭಾವನೆಗಳನ್ನು ಹೇಳಲು ಬಂದವರು ಕೂಗಿದ ಘೋಷಣೆಗಳನ್ನು ನೀವು ಕೇಳಿಲ್ಲವೇ ಎಂದು ಸಿಎಂ ಪ್ರಶ್ನಿಸಿದರು. ತಮ್ಮ ತಂದೆಯ ಹೆಸರನ್ನೂ ಕೆಟ್ಟದಾಗಿ ಬಿಂಬಿಸಿ ದ್ವೇಶ ಹರಡಲು ಲೀಗ್ ಪ್ರಯತ್ನಿಸಿದೆ ಎಂದು ಅವರು ಹೇಳಿದರು. ಕಣ್ಣೂರು ಪಾರಪ್ರದಲ್ಲಿ ನಿನ್ನೆ ನಡೆದ ಸಿಪಿಎಂ ಸಮ್ಮೇಳನದಲ್ಲಿ ಪಿಣರಾಯಿ ಈ ಟೀಕೆ ವ್ಯಕ್ತಪಡಿಸಿದ್ದಾರೆ.