ಕಾಸರಗೋಡು: ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ವಲಿಯಪರಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿರುವುದಾಗಿ ಸ್ಥಳೀಯಾಡಳಿತ ಮತ್ತು ಅಬಕಾರಿ ಖಾತೆ ಸಚಿವ ಎಂ.ವಿ ಗೋವಿಂದನ್ ತಿಳಿಸಿದ್ದಾರೆ.
ಅವರು ವಲಿಯಪರಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ತ್ಯಾಜ್ಯದಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಸಂಪೂರ್ಣ ಘನ-ದ್ರವ ಮಾಲಿನ್ಯ ಸಂಸ್ಕರಣಾ ಯೋಜನೆಯನ್ವಯ ನಿರ್ಮಿಸಲಾದ 1500 ಸೋಕೇಜ್ ಪಿಟ್‍ಗಳ ಉದ್ಘಾನೆ ನೆರವೇರಿಸಿ ಮಾತನಾಡಿದರು. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ವಯ ರಾಜ್ಯದಲ್ಲೇ ಮೊದಲ ಬಾರಿಗೆ ವೈಯಕ್ತಿಕ ಸೋಕೇಜ್ ಪಿಟ್‍ಗಳ ನಿರ್ಮಾಣ ನಡೆದಿದೆ. ಗ್ರಾಪಂ ಅಧ್ಯಕ್ಷ ಸಜೀವನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರೋಜೆಕ್ಟ್ ನಿರ್ದೇಶಕ ಕೆ.ಪ್ರದೀಪನ್, ಜಿಲ್ಲಾ ಶುಚಿತ್ವ ಮಿಶಣ್ ಸಹಾಯಕ ಕೋರ್ಡಿನೇಟರ್ ಸಚಿನ್, ಬ್ಲಾಕ್‍ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಜನಪ್ರತಿನಿಧೀಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಗ್ರಾಪಂ ಉಪಾಧ್ಯಕ್ಷೆ ಪಿ.ಶ್ಯಾಮಲ ಸ್ವಾಗತಿಸಿದರು.