HEALTH TIPS

ಸಿಲ್ವರ್‍ಲೈನ್ ಪ್ರಾಜೆಕ್ಟ್ ಅರ್ಥವಾಗಲಿಲ್ಲ; ಕಲಿಯಲು ಸಮಯ ಬೇಕು; ವಿವರಣೆ ನೀಡಿದ ಶಶಿ ತರೂರ್

                                                      

                  ತಿರುವನಂತಪುರ:  ರಾಜ್ಯ ಸರ್ಕಾರದ ಸಿಲ್ವರ್ ಲೈನ್ ಯೋಜನೆ ವಿರುದ್ಧ ಯುಡಿಎಫ್ ಸಂಸದರ ಮನವಿಗೆ ಸಹಿ ಹಾಕಿಲ್ಲ ಎಂದು ಸಂಸದ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ. ಯೋಜನೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ವಿವರವಾದ ಅಧ್ಯಯನವಿಲ್ಲದೆ ಸಿಲ್ವರ್ ಲೈನ್ ಯೋಜನೆಯನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ತರೂರ್ ಹೇಳಿದರು. ನಾನು ಅರ್ಜಿಗೆ ಸಹಿ ಮಾಡಿಲ್ಲ ಎಂದ ಮಾತ್ರಕ್ಕೆ ನಾನು ಪ್ರಸ್ತುತ ಕೆ ರೈಲ್ ಯೋಜನೆಯ ಪರವಾಗಿ ಇದ್ದೇನೆ ಎಂದು ಅರ್ಥವಲ್ಲ ಎಂದು ತರೂರ್ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.

                ರಾಜ್ಯ ಸರ್ಕಾರದ ಸಿಲ್ವರ್ ಲೈನ್ ಯೋಜನೆಗೆ ವಿರೋಧ ಪಕ್ಷಗಳು ಒಗ್ಗೂಡಿ ಪ್ರತಿಭಟನೆ ನಡೆಸಿದಾಗ ಶಶಿ ತರೂರ್ ಮನವಿಗೆ ಸಹಿ ಹಾಕಲು ಮುಂದಾಗದಿರುವುದು ತೀವ್ರ ಚರ್ಚೆಗೆ ಕಾರಣವಾಯಿತು. ಕೇರಳದಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಯೋಜನೆ ಕುರಿತು ಚರ್ಚಿಸಲು ಸಭೆ ಕರೆದಿದ್ದಾರೆ. ಕೇಂದ್ರ ಸಚಿವರು ಇಂದು ಮಧ್ಯಾಹ್ನ 3 ಗಂಟೆಗೆ ಯುಡಿಎಫ್ ಸಂಸದರ ಜತೆ ಈ ಕುರಿತು ಚರ್ಚೆ ನಡೆಸಲಿದ್ದಾರೆ.

                              ಶಶಿ ತರೂರ್ ಅವರ ಫೇಸ್‍ಬುಕ್ ಪೋಸ್ಟ್ ನ ಪೂರ್ಣ ಆವೃತ್ತಿ:

               ಸೆಮಿ ಹೈಸ್ಪೀಡ್ ರೈಲ್ (ಸಿಲ್ವರ್ ಲೈನ್) ಯೋಜನೆಗೆ ಸಂಬಂಧಿಸಿದಂತೆ ಕೇರಳದ ಯುಡಿಎಫ್ ಸಂಸದರು ಸಹಿ ಮಾಡಿರುವ ಮನವಿಗೆ ನಾನು ಸಹಿ ಮಾಡದಿರುವುದು ಹಲವು ಊಹಾಪೆÇೀಹಗಳಿಗೆ ಕಾರಣವಾಗಿರುವುದು ಮಲಯಾಳಂ ಸುದ್ದಿ ಮಾಧ್ಯಮ ಮಿತ್ರರ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಈ ಯೋಜನೆಯನ್ನು ನಿಖರವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ ಮತ್ತು ವಿಶೇಷವಾಗಿ ಅದರ ಸಂಕೀರ್ಣವಾದ ವಿವಿಧ ಅಂಶಗಳಿಂದ ರಾಜ್ಯಕ್ಕೆ ಮತ್ತು ಜನರಿಗೆ ಏನು ಲಾಭ ಮತ್ತು ನಷ್ಟ ಏನು ಎಂದು ಅಧ್ಯಯನ ಮಾಡಲು ಸಮಯ ತೆಗೆದುಕೊಳ್ಳಲಿದೆ ಎಂಬ ಅಭಿಪ್ರಾಯವನ್ನು ನಾನು ಈ ಹಿಂದೆ ವ್ಯಕ್ತಪಡಿಸಿದ್ದೆ. ನಾನು ಈ ಅರ್ಜಿಗೆ ಸಹಿ ಮಾಡಿಲ್ಲ ಎಂದ ಮಾತ್ರಕ್ಕೆ ನಾನು ಪ್ರಸ್ತುತ ಕೆ ರೈಲು ಯೋಜನೆಯ ಪರವಾಗಿ ಇದ್ದೇನೆ ಎಂದು ಅರ್ಥವಲ್ಲ. ಬದಲಿಗೆ, ಯೋಜನೆಯ ಬಗ್ಗೆ ನಿಖರವಾಗಿ ತಿಳಿಯಲು ಸಮಯ ತೆಗೆದುಕೊಳ್ಳುತ್ತದೆ.

                ನನ್ನ ಸ್ನೇಹಿತರ ಸಹಿ ಮಾಡಿದ ಮನವಿಯಿಂದ (ನಾನು ಇದನ್ನು ಮೊದಲು ನೋಡಿಲ್ಲ) ಈ ಯೋಜನೆಯ ಬಗ್ಗೆ ಕೆಲವು ಅತ್ಯಂತ ಸೂಕ್ತವಾದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂಬುದು ಸ್ಪಷ್ಟವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅದರ ಸಾಮಾಜಿಕ ಸಮಸ್ಯೆಗಳು (ಸ್ಥಳೀಯ ನಿವಾಸಿಗಳ ಮೇಲೆ ಪರಿಣಾಮ ಬೀರುವುದು), ಪರಿಸರ ಸಮಸ್ಯೆಗಳು (ವಿಶೇಷವಾಗಿ ಪರಿಸರ ಸೂಕ್ಷ್ಮ ಪ್ರದೇಶಗಳ ಮೇಲೆ ಪ್ರಭಾವ), ಹಾಗೆಯೇ ಯೋಜನೆಯು ಉಂಟುಮಾಡುವ ಆರ್ಥಿಕ ಹೊರೆ (ವಿಶೇಷವಾಗಿ ಯೋಜನೆಯ ನಿಧಿ, ಯೋಜನೆಯಿಂದ ವಿಧಿಸಲಾದ ಆರ್ಥಿಕ ಹೊಣೆಗಾರಿಕೆ , ಮತ್ತು ಪ್ರಯಾಣದ ವೆಚ್ಚ). ಇವೆಲ್ಲವೂ ಹೆಚ್ಚಿನ ಅಧ್ಯಯನ ಮತ್ತು ಸಮಾಲೋಚನೆಯ ಅಗತ್ಯವಿರುವ ಸಮಸ್ಯೆಗಳಾಗಿವೆ.

                  ಆದ್ದರಿಂದ ರಾಜ್ಯ ಸರಕಾರ ಈ ವಿಷಯದ ಕುರಿತು ಅಧ್ಯಯನ ಮತ್ತು ಚರ್ಚೆಗೆ ವೇದಿಕೆ ಕಲ್ಪಿಸಬೇಕು ಎಂದು ಒತ್ತಾಯಿಸುತ್ತೇನೆ. ಈ ವೇದಿಕೆಯಲ್ಲಿ ತಂತ್ರಜ್ಞಾನ ಹಾಗೂ ಆಡಳಿತ ಕ್ಷೇತ್ರದ ಪ್ರತಿಯೊಬ್ಬ ಕೆ ರೈಲ್ ಯೋಜನೆಯ ತಜ್ಞರು ಹಾಗೂ ಯೋಜನೆಯಿಂದ ಬಾಧಿತರಾದ ಜನರ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು ಪ್ರಸ್ತಾಪಿಸಿದ ಸಮಸ್ಯೆಗಳು ಮುಕ್ತವಾದ ನಂತರವೇ ಮುಂದುವರೆಯಬೇಕು. ಅಧ್ಯಯನ, ಸಮಾಲೋಚನೆ ಮತ್ತು ಚರ್ಚೆ ಅಗತ್ಯವಿದೆ.

                ಇಂತಹ ಪ್ರಕ್ರಿಯೆಯಿಂದ ಮಾತ್ರ ರಾಜ್ಯ ಮತ್ತು ಜನತೆಯ ಹಿತಾಸಕ್ತಿ ಕಾಪಾಡಲು ಸಾಧ್ಯ. ಇದಲ್ಲದೆ, ಈ ಸಂಕೀರ್ಣ ಮತ್ತು ಪ್ರಮುಖ ಅಭಿವೃದ್ಧಿ ಯೋಜನೆಯ ಬಗ್ಗೆ ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರಲು ಇದು ನಮಗೆ ಅನುವು ಮಾಡಿಕೊಡುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries