ಮುಂಬೈ: ರಾಜ್ಯಸಭೆಯಿಂದ ತಮ್ಮನ್ನು ಅಮಾನತು ಮಾಡಿರುವ ಕಾರಣಕ್ಕೆ ಸಂಸದ್ ಟಿವಿಯಲ್ಲಿ ಪ್ರಸಾರವಾಗುವ 'ಮೇರಿ ಕಹಾನಿ' ಕಾರ್ಯಕ್ರಮ ತೊರೆದಿರುವುದಾಗಿ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಭಾನುವಾರ ಹೇಳಿದ್ದಾರೆ.
ಮುಂಬೈ: ರಾಜ್ಯಸಭೆಯಿಂದ ತಮ್ಮನ್ನು ಅಮಾನತು ಮಾಡಿರುವ ಕಾರಣಕ್ಕೆ ಸಂಸದ್ ಟಿವಿಯಲ್ಲಿ ಪ್ರಸಾರವಾಗುವ 'ಮೇರಿ ಕಹಾನಿ' ಕಾರ್ಯಕ್ರಮ ತೊರೆದಿರುವುದಾಗಿ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಭಾನುವಾರ ಹೇಳಿದ್ದಾರೆ.
ಈ ಕುರಿತು ಅವರು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
'ಸಂಸದೀಯ ಸಂಪ್ರದಾಯಗಳು ಹಾಗೂ ನಿಯಮಗಳಿಗೆ ವಿರುದ್ಧವಾಗಿ ನನ್ನನ್ನು ಅಮಾನತು ಮಾಡಲಾಗಿದೆ. ಸದನದಲ್ಲಿ ನನ್ನ ಹಾಗೂ ನಾನು ಪ್ರತಿನಿಧಿಸುವ ಪಕ್ಷದ ಧ್ವನಿಯನ್ನು ಅಡಗಿಸುವ ಸಲುವಾಗಿ ಈ ರೀತಿ ಮಾಡಲಾಗಿದೆ' ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
'ಸಂವಿಧಾನ ನೀಡಿರುವ ಅಧಿಕಾರವನ್ನೇ ನನಗೆ ನಿರಾಕರಿಸಿರುವ ಕಾರಣ, ನಾನು ಸಂಸದ್ ಟವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವುದಿಲ್ಲ' ಎಂದೂ ವಿವರಿಸಿದ್ದಾರೆ.
'ಅಶಿಸ್ತಿನ ನಡವಳಿಕೆ' ಕಾರಣದಿಂದ ರಾಜ್ಯಸಭೆಯ 12 ಸದಸ್ಯರನ್ನು, ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.