ಕೊಚ್ಚಿ: ಚಲನಚಿತ್ರ ತಾರೆಯರ ಸಂಘಟನೆ "ಅಮ್ಮ" ದ ನೂತನ ಆಡಳಿತ ಮಂಡಳಿಯ ಚುನಾವಣೆ ಮುಕ್ತಾಯವಾಗಿದೆ. ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ತೀವ್ರ ಪೈಪೆÇೀಟಿ ಏರ್ಪಟ್ಟಿತು.
ಅಮ್ಮ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಮಣಿಯನ್ ಪಿಳ್ಳೈ ರಾಜು ಮತ್ತು ಶ್ವೇತಾ ಮೆನನ್ ಗೆಲುವು ಸಾಧಿಸಿದ್ದಾರೆ. ಆಶಾ ಶರತ್ ವಿಫಲರಾಗಿದ್ದಾರೆ. ಬಾಬುರಾಜ್, ಲಾಲ್, ಲೀನಾ, ಮಂಜು ಪಿಳ್ಳೈ, ರಚನಾ ನಾರಾಯಣನ್‍ಕುಟ್ಟಿ, ಸುಧೀರ್ ಕರಮನ, ಸುರಭಿ ಲಕ್ಷ್ಮಿ, ಟಿನಿ ಟಾಮ್, ಟೊವಿನೋ ಥಾಮಸ್, ಉಣ್ಣಿ ಮುಕುಂದನ್ ಮತ್ತು ವಿಜಯ್ ಬಾಬು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು. ಮಣಿಯನ್ ಪಿಳ್ಳೈ ರಾಜು, ಲಾಲ್ ಮತ್ತು ಪ್ಯಾನೆಲ್ ಹೊರಗಿನಿಂದ ಸ್ಪರ್ಧಿಸಿದ್ದ ವಿಜಯ್ ಬಾಬು ಗೆಲುವು ಸಾಧಿಸಿದರು.
ನಿವಿನ್ ಪೋಲಿ, ಹನಿ ರೋಸ್ ಮತ್ತು ನಾಸರ್ ಲತೀಫ್ ಅವರು ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿ ಸೋತಿದ್ದಾರೆ. ನೂತನ ಸಮಿತಿಯಲ್ಲಿ ಒಟ್ಟು ಐವರು ಮಹಿಳೆಯರಿದ್ದಾರೆ. ಸಿನಿಮಾ ತಾರೆಯರ ಸಂಘಟನೆಯಾದ ಅಮ್ಮ ಮೊನ್ನೆಯಷ್ಟೇ ಚುನಾವಣೆಗೆ ತಯಾರಿ ನಡೆಸಿತ್ತು. ಅಧ್ಯಕ್ಷರಾಗಿ ಮೋಹನ್ ಲಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಡವೇಳ ಬಾಬು ಅವಿರೋಧವಾಗಿ ಆಯ್ಕೆಯಾದರು. ಕೋಶಾಧಿಕಾರಿಯಾಗಿ ಸಿದ್ದಿಕಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಜಯಸೂರ್ಯ ಆಯ್ಕೆಯಾದರು.