HEALTH TIPS

ರಾಷ್ಟ್ರಹಿತಕ್ಕಾಗಿ ರಾಜಕಾರಣವನ್ನು ಮಾಡಿದ ಧೀಮಂತ ನಾಯಕ ಅಟಲ್ ಜೀ: ರವೀಶ ತಂತ್ರಿ ಕುಂಟಾರು: ಬದಿಯಡ್ಕದಲ್ಲಿ ವಾಜಪೇಯಿ ಜನ್ಮದಿನಾಚರಣೆ, ಹಿರಿಯ ಕಾರ್ಯಕರ್ತರಿಗೆ ಸನ್ಮಾನ

   

                   ಬದಿಯಡ್ಕ: ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ಸಮರ್ಪಿಸಿ ರಾಷ್ಟ್ರಹಿತಕ್ಕಾಗಿ ರಾಜಕಾರಣವನ್ನು ಮುಡಿಪಾಗಿಟ್ಟು  ಎದುರಾಳಿಗಳಿಂದಲೂ ಪ್ರಶಂಸಿಸಲ್ಪಟ್ಟ ಧೀಮಂತ ನಾಯಕ ಅಟಲ್‍ಜೀಯವರ ಜನ್ಮದಿನಾಚರಣೆಯಂದು ಹಿರಿಯರನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.

                  ಶನಿವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಅಟಲ್‍ಜೀ ಸೇವಾ ಸಂಘದ ನೇತೃತ್ವದಲ್ಲಿ ಜರಗಿದ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆಯ ಅಂಗವಾಗಿ ಹಿರಿಯ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

             ಕೇರಳ ರಾಜ್ಯವಿಂದು ಭಯೋತ್ಪಾದರ ತಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮನೆಯೊಳಗೇ ನುಗ್ಗಿ ಆಕ್ರಮಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ರಾಜ್ಯದ ಆಡಳಿತ ಪಕ್ಷವು ಬೆಂಬಲವನ್ನು ನೀಡುತ್ತಿದೆ ಎಂದು ಆರೋಪಿಸಿದ ಅವರು ಮಾಲ್‍ಗಳನ್ನು ಕೇಂದ್ರೀಕರಿಸಿ ಭಯೋತ್ಪಾದಕರನ್ನು ಸೃಷ್ಟಿಸುವ ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ. ಸಮೀಪದ ದ.ಕ., ಬೆಂಗಳೂರು ಮೊದಲಾದೆಡೆಗಳಲ್ಲೂ ಭಯೋತ್ಪಾದಕ ಚಟುವಟಿಕೆಗಳು ನಿರಂತರವಾಗಿ ಏರಿಕೆಯನ್ನು ಕಾಣುತ್ತಿದ್ದು, ಎಚ್ಚೆತ್ತುಕೊಳ್ಳಬೇಕಾದ ಸಂದರ್ಭ ಎಂದರು.

                ಅಟಲ್ ಜೀ ಸೇವಾ ಸಂಘದ  ಅಧ್ಯಕ್ಷ ದಾಮೋದರ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಕೀಲ ಸದಾನಂದ ಕಾಮತ್, ಅಟಲ್‍ಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜ್ಞಾನದೇವ ಶೆಣೈ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಪಕ್ಷದ ಮುಖಂಡರುಗಳಾದ ರಾಮಪ್ಪ ಮಂಜೇಶ್ವರ, ಸುನಿಲ್ ಪಿ.ಆರ್., ಎಂ.ಸುಧಾಮ ಗೋಸಾಡ ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಅಟಲ್‍ಜೀ ಸೇವಾ ಸಂಘದ ಕೋಶಾಧಿಕಾರಿ ವಕೀಲ ಗಣೇಶ್ ಬಿ. ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಕೋವಿಡ್ ಸಂಕಷ್ಟಕಾಲದಲ್ಲಿ ಸಂಘದ ವತಿಯಿಂದ ನಡೆದ ವಿವಿಧ ಸೇವಾಕಾರ್ಯಗಳನ್ನು ತಿಳಿಸಿದರು. ಕಿಟ್ ವಿತರಣೆ, ಮಕ್ಕಳಿಗೆ ಮೊಬೈಲ್, ಬಡಕುಟುಂಬಕ್ಕೆ ಶೌಚಾಲಯ ನಿರ್ಮಾಣ, ಔಷಧಗಳ ವಿತರಣೆ ಮೊದಲಾದ ಸೇವಾಕಾರ್ಯಗಳನ್ನು ಮಾಡಲಾಗಿದ್ದು, ಸುಮಾರು 8 ಲಕ್ಷಕ್ಕೂ ಮಿಕ್ಕ ಹಣವನ್ನು ಉಪಯೋಗಿಸಲಾಗಿದೆ ಎಂದರು. ಇದೇ ಸಂದಭರ್Àದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಚೇರ್ಕೂಡ್ಲು ನಿವಾಸಿ ಬಾಲಕೃಷ್ಣ ಎಂಬವರಿಗೆ ಧನಸಹಾಯ ನೀಡಲಾಯಿತು. ಪಕ್ಷದ 20 ಮಂದಿ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಹಿರಿಯರಾದ ವಿ.ಶ್ರೀಕೃಷ್ಣ ಭಟ್, ಕೋರಿಕ್ಕಾರು ವಿಷ್ಣು ಭಟ್ ಮಾತನಾಡಿದರು. ಸಂಘದ ಸದಸ್ಯರಾದ ಭಾಸ್ಕರ ಕೆ., ವಿಜಯ ಸಾಯಿ, ಚಿತ್ತರಂಜನ್ ಶೆಟ್ಟಿ ಸಹಕರಿಸಿದರು. ಮಾಜಿ ಪಂ. ಸದಸ್ಯ ಮಂಜುನಾಥ ಮಾನ್ಯ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಬಿ.ಕೆ. ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries