ಕಾಸರಗೋಡು: ಮೀನುಗಾರಿಕಾ ಇಲಾಖೆಯ ಸೊಸೈಟಿ ಫಾರ್ ಅಸಿಸ್ಟೆಂಟ್ಸ್ ಟು ಫಿಶರ್ ವಿಮೆನ್(ಎಸ್‍ಎಎಫ್)ವತಿಯಿಂದ ಕರಾವಳಿ ಮೈತ್ರಿ ಯೋಜನೆ ಅಧೀನದಲ್ಲಿ ಕಾರ್ಯಾಚರಿಸುವ ಜಾಯಿಂಟ್ ಲಯಬಿಲಿಟಿ ಗ್ರೂಪ್‍ಗಳ ಚಟುವಟಿಕೆಗಳಿಗಾಗಿ ಫೆಸಿಲಿಟೇಟರ್‍ಗಳ ನೇಮಕಾತಿ ನಡೆಯಲಿದೆ.
ಕರಾವಳಿ ನೈಪುಣ್ಯ ತರಬೇತಿ ಪೂರ್ತಿಗೊಳಿಸಿದವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೀನುಕಾರ್ಮಿಕ ಕುಟುಂಬಗಳ ಪದವಿ ಪೂರೈಸಿದ ಮಹಿಳೆಯರನ್ನೂ ಹುದ್ದೆಗೆ ಪರಿಗಣಿಸಲಾಗುವುದು. ಪ್ರಾಯಮಿತಿ 35ವರ್ಷ ಆಗಿದ್ದು, ಅರ್ಜಿ ನಮೂನೆಗಳು ಕಾಸರಗೋಡು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ತಿತಿತಿ.sಚಿಜಿಞeಡಿಚಿಟಚಿ.oಡಿg ಎಂಬ ವೆಬ್‍ಸೈಟ್ ಮೂಲಕ ಲಭ್ಯವಿದೆ. ಅರ್ಜಿ ಸಲ್ಲಿಸಲು ಡಿ. 21 ಕೊನೆ ದಿನಾಂಕವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(9605875209, 7306662170, 9645259674)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.