ಕಾಸರಗೋಡು: ಕೇರಳ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ವಿಶ್ವ ವಿದ್ಯಾಲಯದ ಐವರು ವಿದ್ಯಾರ್ಥಿಗಳಿಗೆ ಕೋವಿಡ್ ಬಾಧಿಸಿರುವುದರಿಂದ ಡಿ. 21ರಂದು ನಡೆಯಲಿರುವ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಇವರು ಭಾಗವಹಿಸುವ ಬಗ್ಗೆ ಅನಿಶ್ಚಿತಾವಸ್ಥೆ ಮುಂದುವರಿದಿದೆ. ವಿಶ್ವ ವಿದ್ಯಾಲಯದ ಮೆಡಿಕಲ್ ಟೀಮ್, ಶಿಫಾರಸುಮೇರೆಗೆ ಇವರು ಕ್ವಾರಂಟೈನ್‍ನಲ್ಲಿ ಮುಂದುವರಿಯುತ್ತಿದ್ದು, ಇತರ ಐದು ಮಂದಿ ವಿದ್ಯಾರ್ಥಿಗಳೂ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ.
ಪದವಿಪ್ರದಾನ ಸಮಾರಂಭದಲ್ಲಿ ಉಪಕುಲಪತಿ ಅಧ್ಯಕ್ಷತೆ ವಹಿಸಬೇಕಾಗಿದ್ದು ಈ ವೇಳೆಗೆ ಕ್ವಾರಂಟೈನ್ ಪೂರ್ತಿಗೊಳ್ಳದಿದ್ದಲ್ಲಿ, ಬದಲಿ ವ್ಯಕ್ತಿಯನ್ನು ಅಧ್ಯಕ್ಷಸ್ಥಾನಕ್ಕೆ ನೇಮಿಸುವುದು ಅನಿವಾರ್ಯವಾಗಲಿದೆ. ಈ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೆ ಕೈಗೊಳ್ಳಬೇಕಾಗಿದೆ ಎಂದು ವಿಶ್ವ ವಿದ್ಯಾಲಯ ರಿಜಿಸ್ಟ್ರಾರ್‍ಡಾ. ಎನ್. ಸಂತೋಷ್ ಕುಮಾರ್ ತಿಳಿಸಿದ್ದಾರೆ.