ಪಾಣಿಪತ್: ಇತ್ತೀಚೆಗಂತೂ ಮಕ್ಕಳು ಮೊಬೈಲ್ ಬಿಟ್ಟರೇ ಜೀವನವೇ ಇಲ್ಲ ಎಂಬಂತೆ ಬದುಕುತ್ತಿವೆ. ಸಣ್ಣ ವಯಸ್ಸಲ್ಲೇ ಮೊಬೈಲ್ ಆಕರ್ಷಣೆಗೆ ಒಳಗಾಗಿದ್ದ ಬಾಲಕನೋರ್ವ ಜೀವವನ್ನೇ ಕಳೆದುಕೊಂಡಿದ್ದಾನೆ.
ಹರಿಯಾಣದ ಪಾಣಿಪತ್ ಜಿಲ್ಲೆಯ ದಹರ್ ಗ್ರಾಮದಲ್ಲಿನ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಮೊಬೈಲ್ನಲ್ಲಿ ವಿಡಿಯೋ ನೋಡಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಾಲಕ ತನ್ನ ಅಮ್ಮನ ಬಳಿ ಮೊಬೈಲ್ ಪಡೆದು ಮನೆಯ ಕೋಣೆಯೊಳಗೆ ಹೋಗಿದ್ದಾನೆ. 15 ನಿಮಿಷಗಳ ನಂತರ ತಾಯಿ ಕೋಣೆಯೊಳಗೆ ಹೋಗಿ ನೋಡಿದರೆ ಮಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.
ಮಗನ ಆ ಸ್ಥಿತಿ ಕಂಡ ತಾಯಿ ಶವವಾಗಿ ಅಲ್ಲಿಯೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ನೆರೆಹೊರೆಯವರ ಬಾಲಕನ ಸಹಾಯದಿಂದ ಮೃತದೇಹವನ್ನು ಕುಣಿಕೆಯಿಂದ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಘಟನೆ ಸಂಬಂಧ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬರಬೇಕಿದೆ.