ತಿರುವನಂತಪುರ: ರಾಜ್ಯದಲ್ಲಿ ನಿನ್ನೆ ಎಂಟು ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ತಿರುವನಂತಪುರಂ (1), ಕೊಲ್ಲಂ (1), ಎರ್ನಾಕುಳಂ (2), ತ್ರಿಶೂರ್ (2) ಮತ್ತು ಅಲಪ್ಪುಳ (2) ಎಂಬಂತೆ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ದೃಢಪಡಿಸಿದ ಓಮಿಕ್ರಾನ್ ಗಳಲ್ಲಿ ಏಳು ಮಂದಿ ವಿದೇಶದಿಂದ ಬಂದವರು. ತ್ರಿಶೂರ್‍ನಲ್ಲಿ ವ್ಯಕ್ತಿಯೊಬ್ಬನ ಸಂಪರ್ಕದಿಂದ ವೈರಸ್ ಹರಡಿದೆ.
ಮೂರು ವರ್ಷದ ಬಾಲಕಿಯಲ್ಲಿ ರೋಗ ದೃಢಪಟ್ಟಿದೆ. ಮೂರು ವರ್ಷದ ಮಗು ತನ್ನ ಹೆತ್ತವರೊಂದಿಗೆ ಯುಕೆಯಿಂದ ಆಗಮಿಸಿತ್ತು. ವಿಮಾನ ನಿಲ್ದಾಣದಲ್ಲಿ ಕೊರೊನಾ ತಪಾಸಣೆ ನಡೆಸಿದಾಗ ಪೋಷಕರಿಗೆ ನೆಗೆಟಿವ್ ಆಗಿತ್ತು. ಅವರು ಹೋಮ್ ಕ್ವಾರಂಟೈನ್‍ನಲ್ಲಿದ್ದರು. ಮಗುವಿಗೆ ಜ್ವರ ಮತ್ತು ಇತರ ಲಕ್ಷಣಗಳು ಕಂಡುಬಂದ ಬಳಿಕ ಓಮಿಕ್ರಾನ್ ದೃಢಪಟ್ಟಿದೆ.
ಡಿಸೆಂಬರ್ 22 ರಂದು ರಷ್ಯಾದಿಂದ ತಿರುವನಂತಪುರಕ್ಕೆ ಬಂದ ವ್ಯಕ್ತಿ ಮತ್ತು ಡಿಸೆಂಬರ್ 16 ರಂದು ನಮೀಬಿಯಾದಿಂದ ಎರ್ನಾಕುಳಂಗೆ ಆಗಮಿಸಿದ ಕೊಲ್ಲಂ ನಿವಾಸಿಗಳಲ್ಲಿ ವೈರಸ್ ದೃಢಪಟ್ಟಿದೆ. ಡಿ.17ರಂದು ಕತಾರ್ ನಿಂದ ಆಗಮಿಸಿದ್ದ ಆಲಪ್ಪುಳದ ಮಹಿ¼ಗೂ ಮತ್ತು ಡಿ.11ರಂದು ಕತಾರ್‍ನಿಂದ ಎರ್ನಾಕುಳಂಗೆ ಆಗಮಿಸಿದ್ದ ಅಲಪ್ಪುಳದ ಮತ್ತೋರ್ವೆ ಮಹಿಳೆಗೆ ಒಮಿಕ್ರಾನ್ ಪತ್ತೆಯಾಗಿದೆ.
ಯುಕೆಯಿಂದ ಡಿಸೆಂಬರ್ 18 ರಂದು ಎರ್ನಾಕುಳಂಗೆ ಆಗಮಿಸಿದ ಮೂರು ವರ್ಷದ ಬಾಲಕಿಗೆ ಮತ್ತು ಮಗುವಿನ ಪೋಷಕರಲ್ಲಿ ಒಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದೆ. 13 ರಂದು ಕೀನ್ಯಾದಿಂದ ಎರ್ನಾಕುಳಂಗೆ ಆಗಮಿಸಿದ ತ್ರಿಶೂರ್‍ನ ಮಹಿಳೆ ಮತ್ತು ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿದ್ದ ತ್ರಿಶೂರ್‍ನ ಮಹಿಳೆಯಲ್ಲಿ ರೋಗ ದೃಢಪಟ್ಟಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಒಮಿಕ್ರಾನ್ ದೃಢಪಡಿಸಿದ ಮೊದಲ ವ್ಯಕ್ತಿ ಗುಣಮುಖರಾಗಿದ್ದಾರೆ.