ಕೊಚ್ಚಿ: ನಿನ್ನೆ ಮಧ್ಯರಾತ್ರಿ ಅಪರಿಚಿತರಿಂದ ಕೊಲೆಯಾದ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾಮ್ ಅವರ ಪಾರ್ಥಿವ ಶರೀರವನ್ನು ಹೊತ್ತು ಸಾಗಿದ ಯಾತ್ರೆ ಶೋಕಯಾತ್ರೆಯಲ್ಲ ಎಂದು ಎಸ್.ಡಿ.ಪಿ.ಐ. ಹೇಳಿಕೊಂಡಿದೆ. ಎಸ್‍ಡಿಪಿಐ ಮುಖಂಡ ಬಿಡುಗಡೆ ಮಾಡಿರುವ ವಿಡಿಯೋದಲ್ಲಿದೆ ಈ ಹೇಳಿಕೆ ಇದೆ. ಸಂಘಟನೆಗೆ ದೊರೆತ ಹುತಾತ್ಮನ ಸಂಭ್ರಮದಿಂದ ಮೃತದೇಹವನ್ನು ಹಿಂಬಾಲಿಸುತ್ತಿದ್ದೇನೆ ಎಂಬುದು ನಾಯಕನ ಹೇಳಿಕೆ.
ಸಂತಾಪ ಎಂದೂ ಹೇಳಬೇಡಿ. ನಮಗೆ ಒಬ್ಬ ಹುತಾತ್ಮ ಬೇಕಾಗಿದ್ದ. ಆದ್ದರಿಂದ, ಇದು ಶೋಕಾಚರಣೆಯಲ್ಲ, ಇದು ಹುತಾತ್ಮ ಲಭಿಸಿದ ಸಂತೋಷ, ಮತ್ತು ಅಭಿನಂದನೆಗಳ ಪ್ರಯಾಣವಾಗಿದೆ, ”ಎಂದು ಎಸ್‍ಡಿಪಿಐ ಮುಖಂಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಮಾಧ್ಯಮ ಮಿತ್ರರು ಎಂದಿಗೂ ಶೋಕಾಚರಣೆ ಎಂದು ಕರೆಯಬಾರದು ಎಂದು ಎಸ್‍ಡಿಪಿಐ ಮುಖಂಡರು ಹೇಳಿದ್ದಾರೆ. ಇದೇ ವೇಳೆ ಎಸ್ ಡಿಪಿಐ ಮತ್ತು ಬಿ.ಜೆ.ಪಿ. ನಾಯಕರ ಹತ್ಯೆಗೆ ಸಂಬಂಧಿಸಿದಂತೆ 50 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಐಜಿ ಹರ್ಷಿತಾ ಆತಲ್ಲೂರಿ ತಿಳಿಸಿದ್ದಾರೆ. ಹತ್ಯೆಯ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಎಡಿಜಿಪಿ ವಿಜಯ್ ಸಖಾರೆ ತನಿಖೆಯ ಹೊಣೆ ಹೊತ್ತಿದ್ದಾರೆ.