ಕಣ್ಣೂರು: ನಿನ್ನೆ ಸಂಜೆ ತಲಶ್ಶೇರಿಯಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ನಾದಪುರಂ, ಕಡವತ್ತೂರು, ಪರಕ್ಕಡವು ಮತ್ತಿತರ ಕಡೆಯಿಂದ ಕಾರ್ಯಕರ್ತರನ್ನು ತಲಶ್ಶೇರಿಗೆ ಕರೆತಂದು ಪಾಪ್ಯುಲರ್ ಫ್ರಂಟ್ ಪ್ರತಿಭಟನೆ ನಡೆಸಿತು. ಕಾರ್ಯಕರ್ತರು ಭೀಕರ ಘೋಷವಾಕ್ಯಗಳು, ಕೊಲೆ ಬೆದರಿಕೆಗಳ ಮೂಲಕ ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿದರು. ಯುವಮೋರ್ಚಾ ನಾಯಕ ಕೆ.ಟಿ.ಜಯಕೃಷ್ಣನ್ ಮಾಸ್ತರ್ ಬಲಿದಾನ ದಿನÀನಿಮಿತ್ತ ಹಾಕಲಾಗಿದ್ದ ಪ್ಲೆಕ್ಸ್ ಬೋರ್ಡ್ ಹಾಗೂ ಧ್ವಜಗಳನ್ನು ಪ್ರತಿಭಟನಾಕಾರರು ಒಡೆದು ಹಾಕಿದರು.
ಇದೇ ವೇಳೆ ವಾಡಿಕಲ್ ರಾಮಕೃಷ್ಣನ್ ಸ್ಮಾರಕ ಕಟ್ಟಡದ ಮೇಲೆ ದಾಳಿಗೆ ಯತ್ನಿಸಿದಾಗ ಬಿಜೆಪಿ-ಆರ್ ಎಸ್ ಎಸ್ ಕಾರ್ಯಕರ್ತರೂ ಕಚೇರಿ ಆವರಣಕ್ಕೆ ಧಾವಿಸಿದರು.
ಈ ವೇಳೆ ಪೋಲೀಸರು ಆರ್ ಎಸ್ ಎಸ್ ಕಾರ್ಯಕರ್ತರನ್ನು ತಡೆ ಹಿಡಿದು ಹಿಂದೆ ಕಳಿಸಿದರು. ಈ ಸಂದರ್ಭ ಪಾಪ್ಯುಲರ್ ಫ್ರೆಂಟ್ ಕಾರ್ಯಕರ್ತರು ಹುಚ್ಚೆದ್ದು ಸಿಕ್ಕಿಸಿಕ್ಕ ಅಂಗಡಿ ಮುಗ್ಗಟ್ಟುಗಳಿಗೆ ಧಾಳಿ ನಡೆಸಿದರು. ಇದರಿಂದ ಕುಪಿತರಾದ ಸ್ಥಳೀಯರು ಸ್ವತಃ ರಂಗಕ್ಕಿಳಿದು ಫಾಪ್ಯುಲರ್ ಪ್ರಂಟ್ ಕಾರ್ಯಕರ್ತರನ್ನು ಬೆನ್ನತ್ತಿ ಥಳಿಸಿದರು. ತಲಶ್ಶೇರಿ ಸುತ್ತಮುತ್ತ ಓಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ನಗೆಗಡಲಲ್ಲಿ ತೇಲಿಸಿದೆ.
ಪಾಪ್ಯುಲರ್ ಪ್ರೆಂಟ್ ಗೆಳೆಯರು ಬಯಸಿದ್ದು ಸಿಕ್ಕಿದೆ. ವಾರಿಯಂ ಕುನ್ನತ್ ರ ಓಟವನ್ನು ನೆನಪಿಸುವ ರೀತಿಯಲ್ಲಿ ಓಡಿದ್ದು ಗ್ರೇಟ್ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೊಳಗಾಗಿದೆ.