ಮಂಜೇಶ್ವರ: ಹೊಸ ಕೋವಿಡ್ ರೂಪಾಂತರ ಕಾಲಿಡುತ್ತಿರುವಂತೆ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರ ಮೇಲೆ ಮತ್ತೆ ಕಠಿಣ ನಿಬರ್ಂಧಗಳನ್ನು ವಿಧಿಸಲು ಕರ್ನಾಟಕ ಕ್ರಮಕೈಗೊಂಡಿದ್ದು ಈ ಬಗ್ಗೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಕೇರಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮಾಹಿತಿ ನೀಡಿ ನಿರ್ಬಂಧ|ವನ್ನು ಹೊರತುಪಡಿಸುವಂತೆ ಆಗ್ರಹಿಸಿದ್ದಾರೆ.
ಕಾಸರಗೋಡಿನ ವಿಶೇಷವಾಗಿ ಮಂಜೇಶ್ವರದ ಜನರು ತಮ್ಮ ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರದ ಅಗತ್ಯಗಳಿಗಾಗಿ ಮಂಗಳೂರು ನಗರವನ್ನು ದೀರ್ಘಕಾಲ ಅವಲಂಬಿಸಿದ್ದಾರೆ, 2020 ರಲ್ಲಿ ಕೋವಿಡ್ ಮೊದಲ ಹಂತದಲ್ಲಿ ಇಂತಹ ನಿಬರ್ಂಧಗಳನ್ನು ವಿಧಿಸಿದಾಗ 22 ಜನರು ಚಿಕಿತ್ಸೆಗೆ ಮಂಗಳೂರಿಗೆ ತೆರಳಲಾಗದೆ ಸಾವನ್ನಪ್ಪಿದ್ದಾರೆ ಎಂದು ಶಾಸಕರು ತಿಳಿಸಿದರು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉಂಟಾಗುವ ಸವಾಲಿನ ಬಗ್ಗೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಮದು ಎಕೆಎಂ ಅಶ್ರಫ್ ಆಗ್ರಹಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಶಾಸಕ ಅಶ್ರಫ್ ಮನವಿ ನೀಡಿದ್ದಾರೆ.