ಕಾಸರಗೋಡು: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ ಅಂಗವಾಗಿ ಕೆಎಸ್‍ಇಬಿ ವತಿಯಿಂದ ಸಾರ್ವಜನಿಕ ರ್ಯಾಲಿ ಮಂಗಳವಾರ ಕಾಸರಗೋಡಿನಲ್ಲಿ ನಡೆಯಿತು.
ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ನಗರಸಭಾಂಗಣ ವರೆಗೆ ನಡೆದ ರ್ಯಾಲಿಗೆ ಶಾಸಕ ಎನ್.ಎ ನೆಲ್ಲಿಕುನ್ನು ಚಾಲನೆ ನೀಡಿದರು. ಇಂಧನ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರಸಭಾಂಗಣದ ವನಿತಾ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಕಾಸರಗೋಡು ಕೆಎಸ್‍ಇಬಿ ಸರ್ಕಲ್ ಮುಖ್ಯ ಅಭಿಯಂತ ಪಿ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಮಹಾ ಅಭಿಯಂತ ನಾಗರಾಜ ಭಟ್ ಇಂಧನಸಂರಕ್ಷಣೆ ಬಗ್ಗೆ ಪ್ರತಿಜ್ಞೆ ಬೋಧಿಸಿದರು. ಈ ಸಂದರ್ಭ ಸಾರ್ವಜನಿಕರಿಗಾಗಿ ಇಂಧನ ಸಂರಕ್ಷಣೆ ಬಗ್ಗೆ ಜಾಗೃತಿ ತರಗತಿ ನಡೆಯಿತು. ಜಿಲ್ಲಾ ಪ್ರೋಜೆಕ್ಟ್ ಮ್ಯಾನೇಜ್‍ಮೆಂಟ್ ಯೂನಿಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ.ಟಿ ಕರುಣಾಕರನ್ ವಿಷಯ ಮಂಡಿಸಿದರು. ಡಿವಿಶನಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಟಿ.ಪಿ ಆಶಾ, ವಿ.ಟಿ.ವಿ ಮೋಹನನ್, ಪಿ. ಜಯಕೃಷ್ಣನ್, ವಿದ್ಯುತ್ ಇಲಾಖೆ ಇಂಜಿನಿಯರ್‍ಗಳು, ಸಿಬ್ಬಂದಿ ಉಪಸ್ಥಿತರಿದ್ದರು.