ಕಾಸರಗೋಡು: ಕೇರಳ ರಾಜ್ಯದ ಗಡಿನಾಡು ಕಾಸರಗೋಡಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಂಸ್ಥೆಯಾದ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಪ್ರತಿಷ್ಠಿತ ಪ್ರಶಸ್ತಿಯಾದ 'ಕನ್ನಡ ಪಯಸ್ವಿನಿ ಪ್ರಶಸ್ತಿ' ಯನ್ನು ಕೊಲ್ಲಿ ರಾಷ್ಟ್ರದ ಕೋವಿಡ್ ವಾರಿಯರ್, ಕನ್ನಡ ಪ್ರೇಮಿ, ಕವಿ, ಕಲಾವಿದ, ಸಂಘಟಕ, ಸಮಾಜ ರತ್ನ ಸುರೇಶ್ ಶ್ಯಾಮ ರಾವ್ ನೇರಂಬಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅವರು ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಸ್ಥಾಪಕ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಸರಗೋಡು ಬಿಇಎಂ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ರಾಜೇಶ್‍ಚಂದ್ರ ಅವರು ಸುರೇಶ್ ಶ್ಯಾಮ ರಾವ್ ನೇರಂಬಳ್ಳಿ ಅವರ ಸಾಧÀನೆಯನ್ನು ವಿವರಿಸಿದರು. ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ ಅವರು ಶುಭÀಹಾರೈಸಿದರು. ಕಾರ್ಯಕ್ರಮದಲ್ಲಿ ಸತೀಶ್ ಕೂಡ್ಲು, ಯೋಗೀಶ್ ಕೋಟೆಕಣಿ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಮಹಿಳಾ ಸಂಘದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಲೇಖಕ ವಿಷ್ಣು ಶ್ಯಾನುಭೋಗ್, ಪ್ರದೀಪ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಸಂಘಟಕ ಜಗದೀಶ್ ಕೂಡ್ಲು ಕೆ. ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.