ಕೊಚ್ಚಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಕೇರಳ ಮತ್ತು ಲಕ್ಷದ್ವೀಪಕ್ಕೆ ಭೇಟಿಗಾಗಿ ಆಗಮಿಸಲಿದ್ದಾರೆ. ಉಪರಾಷ್ಟ್ರಪತಿಗಳು ಶುಕ್ರವಾರ ಕೊಚ್ಚಿ ನೌಕಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಲಕ್ಷದ್ವೀಪದ ಅಗಟ್ಟಿಗೆ ತೆರಳುವರು. ಲಕ್ಷದ್ವೀಪದ ಕಡಮತ್ ದ್ವೀಪದಲ್ಲಿರುವ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ನಡೆಯುವ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳು ಕಾಲೇಜಯನ್ನು ಉದ್ಘಾಟಿಸಲಿದ್ದಾರೆ.
ಉಪರಾಷ್ಟ್ರಪತಿಯವರು ಭಾನುವಾರ ಕೊಚ್ಚಿಗೆ ವಾಪಸಾಗಲಿದ್ದು, ಶಿಪ್‍ಯಾರ್ಡ್‍ನಲ್ಲಿರುವ ವಿಮಾನವಾಹಕ ನೌಕೆ ವಿಕ್ರಾಂತ್‍ಗೆ ಭೇಟಿ ನೀಡಲಿದ್ದಾರೆ. ನಂತರ ಅವರು ಕೊಚ್ಚಿಯ ಕಾಕ್ಕನಾಡ್‍ನಲ್ಲಿರುವ ಡಿಆರ್‍ಡಿಒದ ನೇವಲ್ ಫಿಸಿಕಲ್ ಮತ್ತು ಸಾಗರಶಾಸ್ತ್ರ ಪ್ರಯೋಗಾಲಯಕ್ಕೆ (ಎನ್‍ಪಿಒಎಲ್) ಭೇಟಿ ನೀಡಲಿದ್ದಾರೆ ಮತ್ತು ಟಾಡ್ ಅರೇ ಇಂಟಿಗ್ರೇಷನ್ ಫೆಸಿಲಿಟಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಸೋಮವಾರ ಕೊಚ್ಚಿಯಿಂದ ಕೊಟ್ಟಾಯಂಗೆ ತೆರಳಲಿರುವ ಉಪರಾಷ್ಟ್ರಪತಿಗಳು ಮನ್ನನಂ ಸೈಂಟ್ ಎಫ್ರೆಮ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಿಎಂಐ-ಸಿಎಂಸಿ ಆಯೋಜಿಸುವ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಕೊಚ್ಚಿಗೆ ಆಗಮಿಸುವ ಅವರು, ಕೊಚ್ಚಿಯ ಸಕ್ರ್ಯೂಟ್ ಹೌಸ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಉನ್ನತ ಶಿಕ್ಷಣ ಸಂಸ್ಥೆಯ ಫಲಿತಾಂಶ ಆಧಾರಿತ ಶಿಕ್ಷಣ ಪ್ರಯೋಗಗಳು’ ಪುಸ್ತಕ ಬಿಡುಗಡೆಗೊಳಿಸುವರು. ಸಂಜೆ ಎರ್ನಾಕುಳಂನ ಐಸಿಎಐ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.