ಕಾಸರಗೋಡು: ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ.21ರಂದು ಕಾಸರಗೋಡು ಭೇಟಿ ಹಿನ್ನೆಲೆಯಲ್ಲಿ ಜಿಲ್ಲೆಯ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಸಂಚಾರ ನಿಯಂತ್ರಣ ಜಾರಿಯಲ್ಲಿರಲಿದೆ.
ರಾಷ್ಟ್ರೀಯ ಹೆದ್ದಾರಿಯಕಲ್ಲಿ ಮಿಙÉೂೀತ್‍ನಿಂದ ಚಟ್ಟಂಚಾಲ್ ವರೆಗೆ, ರಾಜ್ಯ ಹೆದ್ದಾರಿಯ ಪಳ್ಳಿಕೆರೆಯಿಂದ ಕಳನಾಡ್ ವರೆಗೆ, ಚಟ್ಟಂಚಾಲ್‍ನಿಂದ ಮಾಙËಡ್ ಮೂಲಕ ಕಳನಾಡ್ ವರೆಗಿನ ಅಡ್ಡರಸ್ತೆಯಲ್ಲಿ ಈ ನಿಯಂತ್ರಣ ಜಾರಿಯಲ್ಲಿರಲಿದೆ. ಈ ಹಾದಿಯಾಗಿ ಬಸ್ ಹಾಗೂ ಸಣ್ಣ ವಾಹನಗಳನ್ನು ನಿಯಂತ್ರಣದೊಂದಿಗೆ ಸಂಚರಿಸಲು ಅವಕಾಶ ನೀಡಲಾಗುವುದು. ಅತಿಯಾದ ಭಾರ ಹೇರಿಕೊಂಡು ಬರುವ ವಾಹನಗಳನ್ನು ಈ ಹಾದಿಯಾಗಿ ಸಂಚರಿಸಲು ಅವಕಾಶ ನೀಡಲಾಗುವುದಿಲ್ಲೆ ಂದು ಪ್ರಕಟಣೆ ತಿಳಿಸಿದೆ.
ಭಾರಿ ಭದ್ರತೆ:
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಸುರಕ್ಷಾಕ್ರಮ ಬಿಗುಗೊಳಿಸಲಾಗಿದೆ. ಕೇಂದ್ರ ವಿಶ್ವ ವಿದ್ಯಾಲಯದ ವಠಾರದಲ್ಲಿ ಪೊಲೀಸ್, ಕೇಂದ್ರ ಇಂಟೆಲಿಜೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಏಜನ್ಸಿಗಳು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ.14ಮಂದಿ ಡಿವೈಎಸ್‍ಪಿಗಳು, 24 ಇನ್ಸ್‍ಪೆಕ್ಟರ್‍ಗಳು, 122ಮಂದಿ ಎಸ್‍ಐಗಳ ನೇತೃತ್ವದಲ್ಲಿ 1233ಮಂದಿ ಪೊಲೀಸರು ರಕ್ಷಣಾ ಜವಾಬ್ದಾರಿಯಲ್ಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ರಾಷ್ಟ್ರಪತಿ ಮಧ್ಯಾಹ್ನ 1ಕ್ಕೆ ಪೆರಿಯ ಹೆಲಿಪ್ಯಾಡ್‍ಗೆ ಆಗಮಿಸಿ ಬೇಕಲ ರೆಸಾರ್ಟ್‍ಗೆ ತೆರಳುವರು. ಮಧ್ಯಾಹ್ನ 3.30ಕ್ಕೆ ಕೇರಳ ಕೇಂದ್ರ ವಿಶ್ವ ವಿದ್ಯಾಲಯದ ಪೆರಿಯ ಕ್ಯಾಂಪಸ್‍ನಲ್ಲಿ ನಡೆಯುವ ಘಟಿಕೋತ್ಸವದ ಪದವಿಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಸಂಜೆ 4.30ಕ್ಕೆ ನಿರ್ಗಮಿಸುವರು.