HEALTH TIPS

ರಾಜ್ಯದಲ್ಲಿ ಓಮಿಕ್ರಾನ್ ನಿಯಂತ್ರಣ; ಶಬರಿಮಲೆ ಮತ್ತು ಶಿವಗಿರಿ ಯಾತ್ರಾರ್ಥಿಗಳಿಗೆ ಬಾಧಕವಲ್ಲ

                                                

              ತಿರುವನಂತಪುರ: ಓಮಿಕ್ರಾನ್ ವಿಸ್ತರಣೆ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 2ರವರೆಗೆ ವಿಧಿಸಲಾಗಿರುವ ರಾತ್ರಿ ಕಫ್ರ್ಯೂನಿಂದ ಶಬರಿಮಲೆ ಮತ್ತು ಶಿವಗಿರಿಯ ಯಾತ್ರಾರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಯಾತ್ರಾರ್ಥಿಗಳಿಗೆ ನಿರ್ಬಂಧಗಳು ಅನ್ವಯಿಸುವುದಿಲ್ಲ. ಪತ್ತನಂತಿಟ್ಟ ಮತ್ತು ತಿರುವನಂತಪುರ ಜಿಲ್ಲಾಧಿಕಾರಿಗಳ ಶಿಫಾರಸಿನ ಮೇರೆಗೆ ವಿಪತ್ತು ನಿರ್ವಹಣಾ ಇಲಾಖೆ ಈ ಆದೇಶ ಹೊರಡಿಸಿದೆ.

                  ರಾಜ್ಯದಲ್ಲಿ ಒಮಿಕಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ನಿಯಂತ್ರಣವು ಹೊಸ ವರ್ಷದ ಆಚರಣೆಗಳನ್ನು ಸಹ ಗಣನೆಗೆ ತೆಗೆದುಕೊಂಡು ಈ ನಿರ್ಧಾರ ಪ್ರಕಟಿಸಲಾಗಿದೆ.  ಇಂದಿನಿಂದ ತುರ್ತು ಅವಶ್ಯಕತೆಗಳಿಗೆ ಹೊರ ಹೋಗುವವರು ಸ್ವಯಂ ದೃಢೀಕರಣದ ಬಗ್ಗೆ ಕಾಳಜಿ ವಹಿಸಬೇಕು.

              ಆರಾಧನಾಲಯಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ, ಸಮುದಾಯ, ರಾಜಕೀಯ, ಸಾಂಸ್ಕøತಿಕ ಮತ್ತು ಸಾಮಾಜಿಕ ಕೂಟಗಳು ಸೇರಿದಂತೆ ಕಿಕ್ಕಿರಿದ ಕಾರ್ಯಕ್ರಮಗಳನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಅನುಮತಿಸಲಾಗುವುದಿಲ್ಲ. ಅನಗತ್ಯ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ. ವಾಹನ ತಪಾಸಣೆಯನ್ನು ಬಲಪಡಿಸಲಾಗುವುದು. ಬೀಚ್‍ಗಳು, ಶಾಪಿಂಗ್ ಮಾಲ್‍ಗಳು ಮತ್ತು ಸಾರ್ವಜನಿಕ ಉದ್ಯಾನವನಗಳನ್ನು ಸಹ ನಿಯಂತ್ರಿಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries