ತಿರುವನಂತಪುರ: ವಿಶ್ವವಿದ್ಯಾನಿಲಯ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿಗಳೊಂದಿಗೆ ನೇರ ಹಣಾಹಣಿಗೆ ತೆರೆ ಎಳೆದಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿನ ಅಕ್ರಮ ನೇಮಕಾತಿಗಳನ್ನು ಅವರು ಟೀಕಿಸಿದರು. ಕುಲಪತಿ ಹುದ್ದೆಯನ್ನು ಮುಖ್ಯಮಂತ್ರಿಗಳೇ ವಹಿಸಿಕೊಳ್ಳಬೇಕು ಎಂದು ರಾಜ್ಯಪಾಲರು ಪುನರುಚ್ಚರಿಸಿದರು. ಕುಲಪತಿ ಎನ್ನುವುದು ಸಾಂವಿಧಾನಿಕ ಹುದ್ದೆಯಲ್ಲ. ವಿ.ಸಿ. ನೇಮಕಾತಿಯಲ್ಲಿ ರಾಜ್ಯಪಾಲರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ. ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲಾಗದು. ಉನ್ನತ ಶಿಕ್ಷಣಕ್ಕಾಗಿ ಕೇರಳ ಇತರ ಕಡೆಗಳಿಗೆ ತೆರಳಬೇಕಾದ ಸ್ಥಿತಿ ಇದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ಅಕ್ರಮವಾಗಿ ರಾಜಕಾರಣಿಗಳ ಸಂಬಂಧಿಗಳ ನೇಮಕಾತಿ ನಡೆಯುತ್ತಿದೆ ಎಂದು ಟೀಕಿಸಿದರು. ವಿಶ್ವವಿದ್ಯಾನಿಲಯದಲ್ಲಿ ಬಂಧುಗಳ ನೇಮಕಾತಿಗಳು ಸುಸೂತ್ರವಾಗಿ ನಡೆಯುತ್ತಿವೆ. ಎಲ್ಲಾ ಉನ್ನತ ಶ್ರೇಣಿಗಳಲ್ಲಿ, ಸ್ವಯಂಸೇವಕರ ನೇಮಕಾತಿ ಮತ್ತು ಸ್ವಜನಪಕ್ಷಪಾತವಿದೆ. ಕಾಲಡಿ ವಿಶ್ವವಿದ್ಯಾನಿಲಯದ ನೇಮಕಾತಿಗೆ ಒಬ್ಬರಿಗೆ ಮಾತ್ರ ಶಿಫಾರಸು ಮಾಡಿರುವುದು ಸಂಪೂರ್ಣ ಉಲ್ಲಂಘನೆಯಾಗಿದೆ. ವಿ.ಸಿ.ಗಳ ನೇಮಕ ಸೇರಿದಂತೆ ಯಾವುದೇ ರಾಜಕೀಯ ಹಸ್ತಕ್ಷೇಪ ಆಗುವುದಿಲ್ಲ, ವಿಶ್ವವಿದ್ಯಾನಿಲಯಗಳು ನಿಯಮಾನುಸಾರ ಕಾರ್ಯ ನಿರ್ವಹಿಸುತ್ತವೆ ಎಂದು ಖಚಿತವಾಗಿದ್ದರೆ ಮಾತ್ರ ತಾನು ಈ ಹುದ್ದೆಯಲ್ಲಿ ಮುಂದುವರಿಯುವೆ. ಇದನ್ನು ದೃಢೀಕರಿಸಬೇಕಾಗಿದೆ. ಹೆಸರಿಗೆ ಮಾತ್ರ ಕುಲಪತಿಯಾಗಿ ಮುಂದುವರಿಯಲು ತಾನು ಬಯಸುವುದಿಲ್ಲ ಎಮದವರು ಹೇಳಿದರು.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಪಾಲರು ಕುಲಪತಿಯಾಗಿದ್ದಾರೆ. ಇಷ್ಟೆಲ್ಲಾ ಪ್ರಯತ್ನ ಮಾಡಿದರೂ ಸರಕಾರ ಸಹಕಾರ ನೀಡುತ್ತಿಲ್ಲ. ಅಕ್ರಮ ನೇಮಕಾತಿ ಕುರಿತು ಸರಕಾರಕ್ಕೆ ಮಾಹಿತಿ ನೀಡಿದರೂ ಸ್ಪಂದಿಸಿಲ್ಲ. ಇದರೊಂದಿಗೆ ಕುಲಪತಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ವಿರೋಧಿಸಿ ಕುಲಪತಿ ಹುದ್ದೆ ಖಾಲಿ ಇದೆ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಲಿಖಿತವಾಗಿ ತಿಳಿಸಿದ್ದರು. ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಉದ್ದೇಶಗಳನ್ನು ಜಾರಿಗೆ ತರಲು ವಿಶ್ವವಿದ್ಯಾಲಯದ ನಿಯಮಗಳಿಗೆ ತಿದ್ದುಪಡಿ ತಂದು ಕುಲಪತಿ ಹುದ್ದೆಯನ್ನು ವಹಿಸಿಕೊಳ್ಳಬೇಕು ಮತ್ತು ಇದಕ್ಕಾಗಿ ಸುಗ್ರೀವಾಜ್ಞೆ ತಂದರೆ ಅದಕ್ಕೆ ಸಹಿ ಹಾಕಲು ಸಿದ್ಧ ಎಂದು ತಿಳಿಸಿದ್ದಾರೆ.