ಆಲಪ್ಪುಳ: ರಂಜಿತ್ ಹತ್ಯೆಯಲ್ಲಿ ಪೋಲೀಸ ಲೋಪ ಇರುವುದು ಹೌದೆಂದು ಎಡಿಜಿಪಿ ವಿಜಯ್ ಸಖಾರೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ರಂಜಿತ್ ಹತ್ಯೆಯಾಗುತ್ತಾನೆಂದು ಯಾರೂ ನಿರೀಕ್ಷಿಸಿರಲಿಲ್ಲ. ಯಾವುದೇ ಸುಳಿವು ಸಿಕ್ಕಿದ್ದರೆ ಪೋಲೀಸರು ಘಟನೆಯನ್ನು ತಡೆಯಬಹುದಿತ್ತು ಎಂದು ವಿಜಯ್ ಸಖಾರೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಇದೀಗ ಮಾತನಾಡಿ ಅವರು ಪ್ರತಿಕ್ರಿಯೆ ನೀಡಿದರು.
ಮೊದಲ ಕೊಲೆ ನಡೆದ 12 ಗಂಟೆಯೊಳಗೆ ಎರಡನೇ ಘಟನೆ ನಡೆದಿದೆ. ರಂಜಿತ್ ಅವರನ್ನು ದಾಳಿಕೋರರು ಗುರಿಯಾಗಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ. ಅವರ ಮೇಲಿನ ದಾಳಿ ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು. ಸುಳಿವು ಸಿಕ್ಕಿದ್ದರೆ ತಡೆಯಬಹುದಿತ್ತು ಎಂದರು.
ರಂಜಿತ್ ಹತ್ಯೆಗೈದವರ ಸೂಚನೆಗಳು ಲಭ್ಯವಾಗಿವೆ. ಘಟನೆಯಲ್ಲಿ 12 ಮಂದಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದು ಇನ್ನೂ ಹೆಚ್ಚಾಗಬಹುದು. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ಪಷ್ಟ ಸಾಕ್ಷ್ಯಾಧಾರ ದೊರೆತ ಬಳಿಕ ಅವರ ಬಂಧನವನ್ನು ದಾಖಲಿಸಲಾಗುವುದು ಎಂದು ವಿಜಯ್ ಸಖಾರೆ ತಿಳಿಸಿದ್ದಾರೆ.
ಘಟನೆಯಲ್ಲಿ ರಾಜಕೀಯ ಪಿತೂರಿ ನಡೆದಿದೆ. ಈ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದರು.