ಕಾಸರಗೋಡು: ಜಿಲ್ಲಾಡಳಿತ, ಮಹಿಳಾ ಸಂರಕ್ಷಣೆ, ಜಿಲ್ಲಾ ಮಹಿಳಾ ಸೆಲ್ ವತಿಯಿಂದ ಜಾರಿಗೊಳಿಸುವ ವನಿತಾ ಸಂರಕ್ಷಣಾ ಯೋಜನೆ"ಕೂಟ' ಸಂಘಟನೆ ಸದಸ್ಯ ಮಹಿಳೆಯರಿಗಾಗಿ ಕಾರ್ಯಾಗಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ಜೀವನದ ವಿವಿಧ ಹಂತಗಳಲ್ಲಿ ನೋವು ಅನುಭವಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಅವರನ್ನು ಆರ್ಥಿಕ ಸಬಲರನ್ನಾಗಿಸುವ ಗುರಿಯೊಂದಿಗೆ ಕೂಟ ಸಂಘಟನೆ ಕಾರ್ಯಾಚರಿಸುತ್ತಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಸಂರಕ್ಷಣಾಧಿಕಾರಿ ವಿ.ಎಂ ಸುನಿತಾ ಅಧ್ಯಕ್ಷತೆ ವಹಿಸಿದ್ದರು. ಸಬ್ ಜಡ್ಜ್ ಎಂ. ಸುಹೈಬ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ಚಂದ್ರ ನಾಯ್ಕ್, ಜಿಲ್ಲಾ ಮಕ್ಕಳ ಮತ್ತು ಮಹಿಳಾ ಸಂರಕ್ಷಣಾಧಿಕಾರಿ ಶಿಮ್ನಾ, ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಬಿಂದು, ಪ್ರೊಬೆಶನ್ ಅಧಿಕಾರಿ ಪಿ.ಬಿಜು, ವನಿತಾಸೆಲ್ ಸರ್ಕಲ್ ಇನ್ಸ್‍ಪೆಕ್ಟರ್ ಭಾನುಮತಿ ಉಪಸ್ಥಿತರಿದ್ದರು.