HEALTH TIPS

ಸ್ನಾನದ ಬಳಿಕ ಕೂದಲು ಸಿಕ್ಕಾಗುವುದನ್ನು ತಡೆಯಲು ಇಲ್ಲಿವೆ ಪರಿಹಾರೋಪಾಯಗಳು

         ಚಳಿಗಾಲದಲ್ಲಿ ಜನರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಕೂದಲು ಉದುರುವುದು. ಈ ಕಾಲದಲ್ಲಿ ಸಾಮಾನ್ಯವಾಗಿ ನಮ್ಮ ಕೂದಲು ಸಾಕಷ್ಟು ತೇವಾಂಶವನ್ನು ಕಳೆದುಕೊಳ್ಳುತ್ತದೆ ಜೊತೆಗೆ ಬಿಸಿನೀರಿನ ಸ್ನಾನವು ಕೂದಲು ಉದುರುಲು ಕಾರಣವಾಗುವುದು. ಆದ್ದರಿಂದ ನಮ್ಮ ಸಾಮಾನ್ಯ ಕೂದಲ ರಕ್ಷಣೆಯ ದಿನಚರಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ.

              ಸ್ನಾನದ ನಂತರ ಕೂದಲು ಉದುರುವುದು ಸಾಮಾನ್ಯವಾಗಿದ್ದರೂ, ನಾವು ಮಾಡುವ ಕೆಲವೊಂದು ತಪ್ಪುಗಳು ಅವುಗಳ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುವುದು. ಒಣ ನೆತ್ತಿ ಮತ್ತು ಗುಂಗುರು ಕೂದಲನ್ನು ಹೊಂದಿರುವ ಜನರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ ಚಳಿಗಾಲದಲ್ಲಿ ಸ್ನಾನದ ನಂತರ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಲು ಈ ಕೆಳಗಿನ ಸಲಹೆಗಳನ್ನು ಅನುಸರಿಸುವುದು ಉತ್ತಮ.

                    ಸ್ನಾನದ ನಂತರ ಕೂದಲು ಸಿಕ್ಕಾಗುವುದನ್ನು ತಡೆಯಲು ಈ ಕೆಳಗಿನ ಕೂದಲ ರಕ್ಷಣೆಯ ಕ್ರಮಗಳನ್ನು ತಜ್ಞರು ಶಿಫಾರಸು ಮಾಡುತ್ತಾರೆ:

            1. ಅಗಲ ಹಲ್ಲುಗಳಿರುವ ಬಾಚಣಿಗೆ ಬಳಸಿ: ನಿಮ್ಮ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಲು ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಬೇಕು. ಸಣ್ಣ ಹಲ್ಲಿನ ಬಾಚಣಿಗೆಗಳು ನಿಮ್ಮ ಸಿಕ್ಕುಗಟ್ಟಿದ ಕೂದಲನ್ನು ಬೇರ್ಪಡಿಸಲು ಹೆಣಗಾಡುವುದಲ್ಲದೇ, ಹೆಚ್ಚು ಕೂದಲು ತುಂಡಾಗುವುದಕ್ಕೆ ಕಾರಣವಾಗುತ್ತದೆ. ಆದರೆ, ಅಗಲವಾದ ಹಲ್ಲಿನ ಬಾಚಣಿಗೆಗಳು ಕೂದಲನ್ನು ಸುಲಭವಾಗಿ ಬೇರ್ಪಡಿಸುತ್ತವೆ ಜೊತೆಗೆ ಕೂದಲು ತುಂಡಾಗುವುದನ್ನು ತಪ್ಪಿಸಬಹುದು.

           2. ಉತ್ತಮ ಗುಣಮಟ್ಟದ ಸೀರಮ್ ಬಳಸಿ: ಸ್ನಾನದ ನಂತರ ಉತ್ತಮ ಗುಣಮಟ್ಟದ ಸೀರಮ್ ಬಳಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಏಕೆಂದರೆ, ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳುವಲ್ಲಿ ಸೀರಮ್ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಉತ್ತಮ ಗುಣಮಟ್ಟದ ಸೀರಮ್ ಬಳಸುವುದು ಉತ್ತಮ. ಸ್ನಾನದ ನಂತರ ಇದನ್ನು ಬಳಸುವುದರಿಂದ ನಿಮ್ಮ ಕೂದಲಿನ ಸಿಕ್ಕುಗಟ್ಟುವಿಕೆ ಕಡಿಮೆಯಾಗುತ್ತದೆ ಜೊತೆಗೆ ಕೂದಲಿನ ಹೊಳಪು ಹೆಚ್ಚಾಗುತ್ತದೆ.
             3. ಮಾಯಿಶ್ಚರೈಸಿಂಗ್ ಶಾಂಪೂ ಮತ್ತು ಕಂಡೀಷನರ್ ಬಳಸಿ: ಚಳಿಗಾಲ ಎಂದರೆ ಕೂದಲಿನಲ್ಲಿ ಸಾಕಷ್ಟು ತೇವಾಂಶ ಕಡಿಮೆಯಾಗುವುದು. ಅದಕ್ಕಾಗಿ ಮಾಯಿಶ್ಚರೈಸಿಂಗ್ ಶಾಂಪೂ ಮತ್ತು ಕಂಡೀಷನರ್ ಅನ್ನು ಬಳಸುವುದು ಅವಶ್ಯಕ. ಜೊತೆಗೆ ನಿಮ್ಮ ಕೂದಲಿನ ಮೇಲೆ ಉತ್ತಮ ಫಲಿತಾಂಶಕ್ಕಾಗಿ ಸಲ್ಫೇಟ್ ಮುಕ್ತ ನೈಸರ್ಗಿಕ ಶಾಂಪೂಗಳನ್ನು ಬಳಸಿ. ಮಾಯಿಶ್ಚರೈಸಿಂಗ್ ಶಾಂಪೂ ಮತ್ತು ಕಂಡಿಷನರ್ ಕೂದಲಿನ ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುವುದಲ್ಲದೇ, ಕೂದಲಿಗೆ ಉತ್ತಮ ನೋಟವನ್ನು ನೀಡುತ್ತದೆ.
            4.ಮೃದು ಟವೆಲ್ ಬಳಸಿ: ಮೃದುವಾದ ಟವೆಲ್ ಬಳಸುವುದು ಕೂದಲು ಸಿಕ್ಕಾಗುವುದನ್ನು ತಡೆಯಲು ಮುಖ್ಯವಾಗಿದೆ. ಟವೆಲ್ ತುಂಬಾ ಒರಟಾಗಿದ್ದರೆ, ಅದು ಕೂದಲಿನ ಹೊರಪೊರೆಗಳಿಗೆ ತೊಂದರೆ ಮಾಡುತ್ತದೆ. ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಮೃದುವಾದ, ನಯವಾದ ಮತ್ತು ಹೆಚ್ಚು ಘರ್ಷಣೆಯನ್ನು ಉಂಟುಮಾಡದ ಟವೆಲ್ಗಳನ್ನು ಬಳಸಬೇಕು. ಆದ್ದರಿಂದ ಮೃದುವಾದ ಹತ್ತಿ ಟವೆಲ್ ಉತ್ತಮವಾಗಿದೆ.
             5. ಹೀಟ್ ಸಾಧನ ಬಳಸುವುದನ್ನು ತಪ್ಪಿಸಿ: ನೀವು ಸಾಧ್ಯವಾದಷ್ಟು ಸಿಕ್ಕಾದ ಕೂದಲಿನ ಮೇಲೆ ತಾಪನ ಸಾಧನಗಳನ್ನು ಬಳಸುವುದನ್ನು ತಪ್ಪಿಸಬೇಕು. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಒಣಗಿಸಲು ಇತರ ಮಾರ್ಗಗಳಿವೆ, ಅದನ್ನು ಬಳಸಬಹುದು. ಹೆಚ್ಚು ಉಪಕರಣಗಳನ್ನು ಬಳಸಿದರೆ, ಕೂದಲಿನ ಸಮಸ್ಯೆಯು ಹೆಚ್ಚಾಗುತ್ತದೆ. ಅದಕ್ಕಾಗಿ ಮಧ್ಯಮ ಶಾಖ ಉಪಕರಣಗಳು ಮತ್ತು ಶಾಖ ರಕ್ಷಣೆ ಸ್ಪ್ರೇ ಅನ್ನು ಬಳಸಬಹುದು, ಆದರೆ ಪ್ರತಿ ಬಾರಿ ಡ್ರೈಯರ್ ಬಳಸಬೇಡಿ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries