ಬದಿಯಡ್ಕ: ನೀರ್ಚಾಲು ವಿಘ್ನೇಶ್ವರ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ಭಾನುವಾರ ಅಪರಾಹ್ನ ನೀರ್ಚಾಲು ಶಾಲಾ ವಠಾರದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಕೌಶಿಕ ಚರಿತ್ರೆ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಉದ್ಘಾಟಿಸುವರು. ಈ ಸಂದಭರ್À ಅಗಲಿದ ಯಕ್ಷಗಾನ ಕಲಾವಿದರಿಗೆ ನುಡಿನಮನ ಸಲ್ಲಿಸಲಾಯಿತು. ರಾಧಾಕೃಷ್ಣ ಕಲ್ಚಾರ್ ನುಡಿನಮನ ಸಲ್ಲಿಸಿ ಮಾತನಾಡಿದರು. ಬಳಿಕ ನಡೆದ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ತಲ್ಪನಾಜೆ ವೆಂಕಟ್ರಮಣ ಭಟ್, ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಚೈತನ್ಯಕೃಷ್ಣ ಪದ್ಯಾಣ, ಶಿವಶಂಕರ ತಲ್ಪಣಾಜೆ ಭಾಗವಹಿಸಿದರು. ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಜಬ್ಬಾರ್ ಸಮೋ ಸಂಪಾಜೆ, ಪಕಳಕುಂಜ ಶಾಮ ಭಟ್, ಹರೀಶ್ ಬಳಂತಿಮೊಗರು, ಬಾಲಕೃಷ್ಣ ಆಚಾರ್ಯ ನೀರ್ಚಾಲು ತಮ್ಮ ಪಾತ್ರಗಳಿಗೆ ಜೀವವನ್ನು ತುಂಬಿ ಮಾತನಾಡಿದರು. ಸತ್ಯಶಂಕರ ಭಟ್ ಪೆರ್ವ ಸ್ವಾಗತಿಸಿ, ವಿಷ್ಣುಪ್ರಕಾಶ ನೂಜಿಲ ವಂದಿಸಿದರು.