ಆಲಪ್ಪುಳ: ಎಸ್‌ಡಿಪಿಐ ಕಾರ್ಯಕರ್ತರಿಂದ ಜೈ ಶ್ರೀರಾಮ್ ಎಂದು ಕೂಗಲು ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂಬುದು ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಎಡಿಜಿಪಿ ವಿಜಯ್ ಸಾಖರೆ ಹೇಳಿದ್ದಾರೆ. ಬಿಜೆಪಿ ಮುಖಂಡ ರಂಜಿತ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಹಂತಕರ ಸಹಚರರಾದ ಐವರಿಂದ ಈ ಘೋಷಣೆ ಕೂಗಲು ಪೊಲೀಸರು ಒತ್ತಡ ಹಾಕುತ್ತಿರುವರೆಂಬ ಆರೋಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿರುವರು.
ಯಾವುದೇ ಹಂತಕ ತಂಡಗಳು ಸಿಕ್ಕಿಬಿದ್ದಿಲ್ಲ. ಆರೋಪಿಗಳ ಪತ್ತೆ ಕಾರ್ಯ ಜಿಲ್ಲೆಯಾಚೆಗೂ ವಿಸ್ತರಿಸಲಾಗಿದೆ ಎಂದು ವಿಜಯ್ ಸಾಖರೆ ತಿಳಿಸಿದ್ದಾರೆ. ಇಂದು ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನಿನ್ನೆ ಅಲಪ್ಪುಳ ಕಲೆಕ್ಟರೇಟ್ ನಲ್ಲಿ ನಡೆದ ಶಾಂತಿ ಸಭೆಯಲ್ಲಿ ಬಂಧಿತರಾದ ಆರೋಪಿಗಳ ಸಹಚರರಲ್ಲಿ ಪೊಲೀಸರು ಜೈ ಶ್ರೀರಾಮ್ ಎಂದು ಕರೆಯಲು ಒತ್ತಡ ಹಾಕುತ್ತಿದ್ದಾರೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷರು ಆರೋಪಿಸಿದ್ದಾರೆ. ಸಭೆಯ ನಂತರ ಎಸ್‌ಡಿಪಿಐ ಈ ಬಗ್ಗೆ ದೂರು ನೀಡಿತ್ತು.