ಮಂಜೇಶ್ವರ: ಕಣ್ವತೀರ್ಥದ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದಲ್ಲಿ ಉಡುಪಿ ಪೇಜಾವರ ಮಠದ ಕೀರ್ತಿಶೇಶ ವಿಶ್ವೇಶ ತೀರ್ಥ ಸ್ವಾಮೀಜಿಯವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಿತು. ಪ್ರದೀಪ್ ಕುಮಾರ್ ಕಲ್ಕೂರ ಮಂಗಳೂರು, ಜನಾರ್ಧನ ಭಟ್, ಗೋಪಾಲ ಶೆಟ್ಟಿ ಅರಿಬೈಲು, ಮಧುಸೂದನ್ ಆಚಾರ್ಯ, ಅರ್ಚಕ ರಮೇಶ್ ಉಪಾಧ್ಯಾಯ, ಸುಧಾಕರ ರಾವ್ ಪೇಜಾವರ, ಸೋಮಪ್ಪ ಮಾಸ್ತರ್ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಪುಷ್ಪಾರ್ಚನೆಗೈದು ಸ್ವಾಮೀಜಿಯವರಿಗೆ ನುಡಿ ನಮನ ಸಲ್ಲಿಸಿದರು.