ಬದಿಯಡ್ಕ: ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವ್ಯಾಪಾರ ಸಂಕೀರ್ಣÀದ ಲೋಕಾರ್ಪಣೆ ಹಾಗೂ ದೀರ್ಘ ಕಾಲದಿಂದ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿದ್ದ ಶ್ರೀ ಎಂ.ಜೆ. ರಾಜ ಅವರಿಗೆ ಗೌರವ ಅಭಿನಂದನೆ ಕಾರ್ಯಕ್ರಮ ಸ|ಓಮವಾರ ಜರಗಿತು.
ಎಡನೀರು ಮಠಾಧೀಶ ಶ್ರೀ. ಸಚ್ಚಿದಾನಂದ ಭಾರತೀ ಶ್ರೀಗಳು ಕಟ್ಟಡ ಲೋಕಾರ್ಪಣೆಗೊಳಿಸಿ ಅಭಿನಂದಿಸಿದರು. ಕೃಷ್ಣದಾಸ್ ತಂತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ಕೋಡಿವಳಪ್ಪು ಚರದನ್ ನಾಯರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.