ಮುಳ್ಳೇರಿಯ: ಗುರುವಾಯೂರು ದೇವಸ್ವಂ ಬೋರ್ಡ್ ವಷರ್ಂಪ್ರತಿ ಆಯೋಜಿಸುವ ಚೆಂಬೈ ಸಂಗೀತೋತ್ಸವದಲ್ಲಿ ಹಾಡಲು ಗಡಿನಾಡು ಕಾಸರಗೋಡಿನ ಕನ್ನಡಿಗ ಪ್ರಕಾಶ ಆಚಾರ್ಯ ಕುಂಟಾರು ಆಯ್ಕೆಯಾಗಿದ್ದಾರೆ.
ಡಿಸೆಂಬರ್ 3ರಂದು 12.30 ಗಂಟೆಯಿಂದ ಹಾಡುಗಾರಿಕೆಗೆ ಅವಕಾಶ ದೊರೆತಿದ್ದು "ಗಾನಮೂರ್ತೆ" ಎಂಬ ಆಯ್ದ ಕೀರ್ತನೆಯನ್ನು ಪ್ರಕಾಶ ಆಚಾರ್ಯ ಪ್ರಸ್ತುತಪಡಿಸಲಿದ್ದು ಕಾರ್ಯಕ್ರಮವನ್ನು ದೇವಸ್ವಂ ಬೋರ್ಡ್ ನೇರ ಪ್ರಸಾರ ನಡೆಸಲಿದೆ. ಕಾಸರಗೋಡಿನ ಸಂಗೀತ ವಿದುಷಿ ಉಷಾ ಈಶ್ವರ ಭಟ್ ಅವರ ಶಿಷ್ಯರಾಗಿರುವ ಪ್ರಕಾಶ್ ಆಚಾರ್ಯ ಉತ್ತಮ ಹಾರ್ಮೋನಿಯ ವಾದಕರಾಗಿ ವಿವಿಧೆಡೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.