ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ವಾರ್ಷಿಕ ಷಷ್ಠೀ ಉತ್ಸವ ಡಿ. 9 ಹಾಗೂ 10 ರಂದು ಬ್ರಹ್ಮಶ್ರೀ ಅರವತ್ತ್ ದಾಮೋದರ ತಂತ್ರಿಗಳವರ ಕಾರ್ಮಿಕತ್ವದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ನಡೆಯಲಿದೆ.
ಡಿ. 9 ರಂದು ಗುರುವಾರ ಬೆಳಗ್ಗೆ ಗಣಹೋಮ, ನವಕಾಭಿಷೇಕ , ತುಲಾಭಾರಸೇವೆ, ಮಧ್ಯಾಹ್ನ ಪೂಜೆ, ಶ್ರೀಭೂತಬಲಿ ನಡೆಯಲಿದೆ. 10 ರಂದು ಶುಕ್ರವಾರ ಬೆಳಿಗ್ಗೆ ಉಷಪೂಜೆ, ಶಿವೇಲಿ, ಪೂಜೆ , ಮಂತ್ರಾಕ್ಷತೆ, ಅನ್ನಪ್ರಸಾದ, ವಿಷ್ಣುಮುರ್ತಿ ದೈವದ ಕೋಲ, ರಾತ್ರಿ 7.30 ರಿಂದ ಶ್ರೀರಂಗಪೂಜೆ ನಡೆಯಲಿದೆ.